ಸೋಮವಾರ, ಆಗಸ್ಟ್ 15, 2022
25 °C

ಹುಟ್ಟುಹಬ್ಬದ ಸಂಭ್ರಮದಲ್ಲಿ ದಿಶಾ ಪಟಾನಿ: ಅಭಿಮಾನಿಗಳಿಂದ ಶುಭ ಹಾರೈಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Disha Patani Instagram

ಬೆಂಗಳೂರು: ಬಾಲಿವುಡ್‌ನ ಪ್ರಮುಖ ನಟಿಯರಲ್ಲಿ ಒಬ್ಬರಾದ ದಿಶಾ ಪಟಾನಿ ಜೂನ್ 13ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ದಿಶಾ ಪಟಾನಿ ನಟಿಸಿರುವ ಚಿತ್ರಗಳ ಸಂಖ್ಯೆ ಕಡಿಮೆಯಿದ್ದರೂ, ಅಭಿಮಾನಿಗಳ ಸಂಖ್ಯೆ ಜಾಸ್ತಿಯೇ ಇದೆ.

ಈ ಬಾರಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಟೈಗರ್ ಶ್ರಾಫ್ ತಾಯಿ ಆಯೇಶಾ ಶ್ರಾಫ್, ದಿಶಾಗೆ ಶುಭಹಾರೈಸಿದ್ದು ವಿಶೇಷವಾಗಿದೆ. ದಿಶಾ ಜತೆಗಿನ ಸೆಲ್ಫಿ ಮತ್ತು ಆಕೆ ಎಮ್ಮೆ ಕರು ಜತೆಗೆ ಇರುವ ಫೋಟೊ ಒಂದನ್ನು ಆಯೇಶಾ ಶ್ರಾಫ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

2015ರಲ್ಲಿ ತೆಲುಗಿನ ಲೋಫರ್ ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ ದಿಶಾ, ಸುಶಾಂತ್ ಸಿಂಗ್ ರಜಪೂತ್ ನಟನೆಯ ಎಂಎಸ್ ಧೋನಿ ದಿ ಅನ್‌ಟೋಲ್ಡ್ ಸ್ಟೋರಿ ಮೂಲಕ ಜನಪ್ರಿಯತೆ ಗಳಿಸಿದ್ದರು. ಅಲ್ಲದೆ, ಇತ್ತೀಚೆಗೆ ತೆರೆಕಂಡ ಸಲ್ಮಾನ್ ಖಾನ್ ಅಭಿನಯದ ರಾಧೆ ಚಿತ್ರದಲ್ಲೂ ದಿಶಾ ಕಾಣಿಸಿಕೊಂಡಿದ್ದರು.

 

ಬೀಚ್ ಹಾಲಿಡೇ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹೆಚ್ಚಾಗಿ ಪೋಸ್ಟ್ ಮಾಡುವ ಮೂಲಕ ದಿಶಾ ಸದಾ ಅಭಿಮಾನಿಗಳ ಜತೆ ಸಂಪರ್ಕದಲ್ಲಿರುತ್ತಾರೆ.

ಹಾಟ್ ಚಿತ್ರಗಳಿಂದ ಗಮನ ಸೆಳೆದ ದಿಶಾ ಪಟಾನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು