ಶುಕ್ರವಾರ, ಸೆಪ್ಟೆಂಬರ್ 17, 2021
29 °C

ಕಾಜಲ್, ದುಲ್ಕರ್‌ ಹಿಂಬಾಲಕರ ಸಂಖ್ಯೆ ಗೊತ್ತಾ?!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲಯಾಳ ನಟ ದುಲ್ಕರ್ ಸಲ್ಮಾನ್ ಅವರು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಐವತ್ತು ಲಕ್ಷ ಹಿಂಬಾಲಕರನ್ನು ಸಂಪಾದಿಸಿದ್ದಾರೆ. ಇದೇ ಸಂದರ್ಭದಲ್ಲಿ, ಬಾಲಿವುಡ್ ನಟಿ ಕಾಜಲ್ ಅವರು ಇನ್‌ಸ್ಟಾಗ್ರಾಂನಲ್ಲಿ ಒಂದು ಕೋಟಿ ಹಿಂಬಾಲಕರನ್ನು ಗಿಟ್ಟಿಸಿಕೊಂಡಿದ್ದಾರೆ.

ದುಲ್ಕರ್ ಅವರು ಈ ವಿಚಾರವನ್ನು ಇನ್‌ಸ್ಟಾಗ್ರಾಂ ಮೂಲಕವೇ ಹಂಚಿಕೊಂಡಿದ್ದಾರೆ. ‘ಇಂದು ನಾವು ಐವತ್ತು ಲಕ್ಷ ಜನರ ಕುಟುಂಬವಾದೆವು. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದ. ನಾನು ಇದರಿಂದ ಇನ್ನಷ್ಟು ವಿನೀತನಾದೆ. ಚಿರಋಣಿ’ ಎಂದು ದುಲ್ಕರ್ ಬರೆದಿದ್ದಾರೆ.

‘ಉಸ್ತಾದ್ ಹೋಟೆಲ್’, ‘ಬ್ಯಾಂಗಲೋರ್ ಡೇಸ್’ನಂತಹ ಜನಪ್ರಿಯ ಮಲಯಾಳ ಸಿನಿಮಾಗಳು ದುಲ್ಕರ್ ಅವರಿಗೆ ಹೆಸರು ತಂದುಕೊಟ್ಟಿವೆ. ‘ಉಸ್ತಾದ್ ಹೋಟೆಲ್’ ಚಿತ್ರವು ‘ಗೌಡ್ರು ಹೋಟೆಲ್’ ಹೆಸರಿನಲ್ಲಿ ರಿಮೇಕ್ ಆಗಿದೆ. ದುಲ್ಕರ್ ಅವರು 2018ರಲ್ಲಿ ‘ಕಾರ್ವಾನ್’ ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್‌ ಪ್ರವೇಶಿಸಿದ್ದಾರೆ.

ಕಾಜಲ್ ಹೇಳಿದ್ದು: ಬಾಲಿವುಡ್‌ ನಟಿ ಕಾಜಲ್ ಅವರು ತಮಗೆ ಒಂದು ಕೋಟಿ ಹಿಂಬಾಲಕರು ಸಿಕ್ಕಿದ್ದನ್ನು ಕೂಗಿ ಹೇಳಿದ್ದಾರೆ. ‘ಇನ್‌ಸ್ಟಾಗ್ರಾಂನಲ್ಲಿ ನನ್ನ ಅಭಿಮಾನಿಗಳಿಗೆ ನಾನು ಈ ಮಾತನ್ನು ಕೂಗಿ ಹೇಳುತ್ತಿದ್ದೇನೆ. ತೆರೆಯ ಮೇಲಿನ ಹಾಗೂ ತೆರೆಯ ಹಿಂದಿನ ನನಗೆ ಇಷ್ಟೊಂದು ಪ್ರೀತಿ ಕೊಟ್ಟವರಿಗೆ ಧನ್ಯವಾದಗಳು’ ಎಂದು ಕಾಜಲ್ ಹೇಳಿದ್ದಾರೆ.

ಈ ಪೋಸ್ಟ್‌ ಜೊತೆ ಕಾಜಲ್ ಅವರು ತಾವು ಅಭಿನಯಿಸಿದ ಹಿಟ್ ಸಿನಿಮಾ ‘ಕಭಿ ಖುಷಿ ಕಭಿ ಗಮ್‌’ನ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಕಾಜಲ್ ಅವರು ತೀರಾ ಈಚೆಗೆ ‘ದೇವಿ’ ಎನ್ನುವ ಕಿರುಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಪ್ರಿಯಾಂಕಾ ಬ್ಯಾನರ್ಜಿ ನಿರ್ದೇಶಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು