ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಿಯನ್‌ ಭಾಷೆಗೆ ರಿಮೇಕ್‌ ಆಗಲಿರುವ ’ದೃಶ್ಯಂ’

Published 22 ಮೇ 2023, 2:21 IST
Last Updated 22 ಮೇ 2023, 2:21 IST
ಅಕ್ಷರ ಗಾತ್ರ

ಭಾರತದ ನಾಲ್ಕು ಭಾಷೆಗಳಲ್ಲಿ ರಿಮೇಕ್‌ ಆಗಿ ಹಿಟ್‌ ಚಿತ್ರ ಎನಿಸಿಕೊಂಡಿರುವ ಮಲಯಾಳಂನ 'ದೃಶ್ಯಂ' ಚಿತ್ರ ಇದೀಗ ಕೊರಿಯನ್‌ ಭಾಷೆಗೆ ರಿಮೇಕ್‌ ಆಗಲು ತಯಾರಾಗಿದೆ. ದಕ್ಷಿಣ ಕೊರಿಯಾದ ಅಂಥಾಲಜಿ ಸ್ಟುಡಿಯೋಸ್‌ ಮತ್ತು ಭಾರತದ ಪನೋರಮಾ ಸ್ಟುಡಿಯೋಸ್‌ ಸಿನಿಮಾ ನಿರ್ಮಾಣದ ಪಾಲುದಾರಿಕೆಯನ್ನು ಪಡೆದುಕೊಂಡಿವೆ.

ಕ್ರೈಮ್‌ ಥ್ರಿಲ್ಲರ್‌ ಕಥೆಯಾಧಾರಿತ ಈ ಸಿನಿಮಾ 2013ರಲ್ಲಿ ಮಲಯಾಳಂನಲ್ಲಿ ತಯಾರಾಗಿತ್ತು. ಜೀತು ಜೋಸೆಫ್‌ ಈ ಚಿತ್ರವನ್ನು ನಿರ್ದೇಶಿಸಿದ್ದು, ಆಶೀರ್ವಾದ್ ಸಿನಿಮಾಸ್‌ ಸಂಸ್ಥೆಯ ಆಂಟೋನಿ ಪೆರುಂಬವೂರ್ ಈ ಚಿತ್ರವನ್ನು ನಿರ್ಮಿಸಿದ್ದರು. ಮಲಯಾಳಂನಲ್ಲಿ ಚಿತ್ರ ಯಶಸ್ವಿಯಾದ ನಂತರ ಭಾರತದ ನಾಲ್ಕು ಪ್ರಮುಖ ಭಾಷೆಗಳಿಗೆ(ಕನ್ನಡ, ತಮಿಳು, ತೆಲುಗು, ಹಿಂದಿ) ಈ ಚಿತ್ರ ರಿಮೇಕ್‌ ಆಗಿತ್ತು. ಆ ಭಾಷೆಗಳಲ್ಲಿಯೂ ಚಿತ್ರ ಭಾರಿ ಯಶಸ್ಸು ಗಳಿಸಿತ್ತು. ಪನೋರಮಾ ಸ್ಟುಡಿಯೋಸ್‌ ಈ ಚಿತ್ರವನ್ನು ಹಿಂದಿ ಭಾಷೆಗೆ ರಿಮೇಕ್ ಮಾಡಿತ್ತು.

’ಕಾನ್‌ ಚಿತ್ರೋತ್ಸವದಲ್ಲಿ ಸಿನಿಮಾವನ್ನು ಕೊರಿಯನ್ ಭಾಷೆಗೆ ರಿಮೇಕ್ ಮಾಡುವ ನಿರ್ಧಾರಕ್ಕೆ ಬಂದಿದ್ದೆವೆ. ಅಂಥಾಲಜಿ ಸ್ಟುಡಿಯೋಸ್‌ನ ಜೇ ಜೋಯ್‌ ಇದಕ್ಕೆ ಒಪ್ಪಿಕೆ ನೀಡಿದ್ದಾರೆ. ಪಾಲುದಾರಿಕೆಯಲ್ಲಿ ಸಿನಿಮಾ ರಿಮೇಕ್ ಮಾಡಲಿದ್ದೇವೆ’ ಎಂದು ಪನೋರಮಾ ಸ್ಟುಡಿಯೋಸ್‌ ನಿರ್ಮಾಣ ಸಂಸ್ಥೆಯ ಅಧ್ಯಕ್ಷ ಕುಮಾರ್ ಮಂಗತ್‌ ಪಾಠಕ್‌ ಹೇಳಿದ್ದಾರೆ.

'ದೃಶ್ಯಂ ಚಿತ್ರವನ್ನು ಕೊರಿಯನ್ ಭಾಷೆಗೆ ರಿಮೇಕ್ ಮಾಡಲು ನಾನು ಉತ್ಸುಕನಾಗಿದ್ದೇನೆ. ಕೊರಿಯನ್ ಭಾಷೆಗೆ ರಿಮೇಕ್ ಆಗುತ್ತಿರುವ ಮೊದಲನೆ ಭಾರತೀಯ ಚಿತ್ರವಾಗಿದೆ. ರಿಮೇಕ್‌ ಮಾಡುವುದರಿಂದ ಭಾರತೀಯ ಚಿತ್ರರಂಗ ಜಾಗತಿಕ ಮಟ್ಟದಲ್ಲಿ ಗುರುತಿಸುಕೊಳ್ಳುವಂತಾಗುತ್ತದೆ. ಇಷ್ಟು ವರ್ಷ ಕೊರಿಯನ್‌ ಚಿತ್ರಗಳನ್ನು ಕಂಡು ನಾವು ಸ್ಟೂರ್ತಿ ಪಡೆಯುತ್ತಿದ್ದೇವು. ಈಗ ಅವರು ನಮ್ಮ ಚಿತ್ರದಿಂದ ಸ್ಟೂರ್ತಿ ಪಡೆದಿದ್ದಾರೆ. ಇದಕ್ಕಿಂತ ದೊಡ್ಡ ಸಾಧನೆ ಮತ್ತೊಂದಿಲ್ಲ’ ಎಂದು ಕುಮಾರ್ ಮಂಗತ್‌ ಪಾಠಕ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT