ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷಯ್ ಹೊಸ ಅವತಾರ!

Last Updated 28 ಜುಲೈ 2019, 19:45 IST
ಅಕ್ಷರ ಗಾತ್ರ

ಬಿ–ಟೌನ್‌ನ ಬ್ಯುಸಿ ನಟರಲ್ಲಿ ಅಕ್ಷಯ್‌ ಕುಮಾರ್ ಹೆಸರು ಮುಂಚೂಣಿಯಲ್ಲಿದೆ. ಕಾಮಿಡಿ, ಆ್ಯಕ್ಷನ್, ಥ್ರಿಲ್ಲರ್ ಹೀಗೆ ಹಲವು ಜಾನರ್‌ಗಳಲ್ಲಿ ಅವರು ನಟಿಸಿರುವ ಸಿನಿಮಾಗಳು ಒಂದರ ಹಿಂದೆ ಒಂದರಂತೆ ಗೆಲುವಿನ ಪಟಾಕಿ ಹೊಡೆದಿವೆ. ಅಷ್ಟರಮಟ್ಟಿಗೆ ಗ್ಯಾರಂಟಿ ನಟ ಆತ. ಮಿಷನ್ ಮಂಗಲ್, ಗುಡ್ ನ್ಯೂಸ್, ಲಕ್ಷ್ಮಿ ಬಾಂಬ್, ಹೌಸ್‌ಫುಲ್ 4 ಮತ್ತು ಸೂರ್ಯವಂಶಿ... ಅಕ್ಷಯ್‌ಕುಮಾರ್ ನಟಿಸಿದ ಇಷ್ಟು ಸಿನಿಮಾಗಳು ಇನ್ನೂ ಬಿಡುಗಡೆಯಾಗಬೇಕಿವೆ. ಇತ್ತೀಚೆಗೆ ಬಿಡುಗಡೆಯಾದ ಮಿಷನ್ ಮಂಗಲ್ ಸಿನಿಮಾ ಟ್ರೇಲರ್ ಸಾಮಾಜಿಕ ಜಾಲತಾಣದಲ್ಲಿ ಬಹುಪರಾಕ್ ಗಿಟ್ಟಿಸಿದೆ.

ಇಷ್ಟೆಲ್ಲದರ ನಡುವೆಯೇ ಅಕ್ಷಯ್ ತಮ್ಮ ಅಭಿಮಾನಿಗಳಿಗೆ ಹೊಸದೊಂದು ಸಿಹಿಯಾದ ಶಾಕ್ ನೀಡಿದ್ದಾರೆ. ಆ ಶಾಕ್‌ ಏನೆಂದರೆ ಅವರ ಹೊಸ ಸಿನಿಮಾದ ಫಸ್ಟ್‌ ಲುಕ್‌. ಚಿನ್ನದ ಬಣ್ಣದ ಜರಿಯುಳ್ಳ ಕಡುಗಪ್ಪು ಬಣ್ಣದ ಲುಂಗಿ ಸುತ್ತಿಕಟ್ಟಿಕೊಂಡು, ಕತ್ತಿನಲ್ಲಿ ಗೋಲ್ಡನ್ ಚೈನ್‌ ಸುತ್ತಿಕೊಂಡು, ಭಕ್ತನ ಅವತಾರದಲ್ಲಿ ನಿಂತಿರುವ ಅಕ್ಷಯ್‌ ಲುಕ್‌ ಮಾತ್ರ ಖಡಕ್ ಆಗಿದೆ. ಈ ವೈರುದ್ಧ್ಯವೇ ಸಿನಿಮಾದ ಹೂರಣವನ್ನೂ ಸೂಚಿಸುವ ಹಾಗಿದೆ.

ಅಂದಹಾಗೆ, ಇದು ‘ಬಚ್ಚನ್ ಪಾಂಡೆ’ ಸಿನಿಮಾದ ಮೊದಲ ಪೋಸ್ಟರ್. ಪರ್ಹಾದ್‌ ಸಾಮ್ಜಿ ಆ್ಯಕ್ಷನ್ ಕಟ್ ಹೇಳಿರುವ, ಸಾಜಿದ್‌ ನಾದಿಯಾವಾಲಾ ನಿರ್ಮಾಣದ ‘ಬಚ್ಚನ್ ಪಾಂಡೆ’ ಸಿನಿಮಾದ ಪೋಸ್ಟರ್ ಅನ್ನು ಅಕ್ಷಯ್‌ ಅವರೇ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಜೊತೆಗೆ ‘2020ರ ಕ್ರಿಸ್‌ಮಸ್‌ಗೆ ಬರುತ್ತಿದೆ’ ಎಂಬ ಅಡಿಟಿಪ್ಪಣಿಯನ್ನೂ ಹಾಕಿದ್ದಾರೆ. 51 ವರ್ಷದ ಅಕ್ಷಯ್‌ ಅವರ ಫಿಟ್‌ ಬಾಡಿ ಅಭಿಮಾನಿಗಳಲ್ಲಿ ಥ್ರಿಲ್ ಹುಟ್ಟಿಸುವ ಹಾಗಿದೆ.

‘ಹೌಸ್‌ಫುಲ್‌ 4’ ನಂತರ ಸಾಜಿದ್ ನಾದಿಯಾವಾಲಾ ಮತ್ತು ಅಕ್ಷಯ್‌, ‘ಬಚ್ಚನ್ ಪಾಂಡೆ’ಯ ಮೂಲಕ ಮತ್ತೆ ಒಂದಾಗಿದ್ದಾರೆ. ನಿರ್ದೇಶಕ ಪರ್ಹಾದ್ ಈ ಹಿಂದೆ ‘ಹೌಸ್‌ಫುಲ್ 3’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದರು. ಈ ಮೂವರ ಕಾಂಬಿನೇಷನ್‌ನಲ್ಲಿ ಬರುತ್ತಿರುವ ‘ಬಚ್ಚನ್ ಪಾಂಡೆ’ಯ ಕುರಿತು ಈಗಾಗಲೇ ನಿರೀಕ್ಷೆ ಗರಿಗೆದರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT