ಭಾನುವಾರ, ಆಗಸ್ಟ್ 14, 2022
28 °C

ಲಾಕ್‌ಡೌನ್‌ನಲ್ಲಿ ಪುತ್ರಿಯ ಹೇರ್‌ಕಟ್ ಮಾಡಿದ ನಟಿ ಸುಷ್ಮಿತಾ ಸೇನ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Sushmita Sen Instagram

ಬೆಂಗಳೂರು: ದೇಶದಲ್ಲಿ ಲಾಕ್‌ಡೌನ್ ಅವಧಿಯಲ್ಲಿ ಸೆಲೆಬ್ರಿಟಿಗಳು ವಿವಿಧ ರೀತಿಯ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಮಿಸ್ ಯುನಿವರ್ಸ್ ಸುಷ್ಮಿತಾ ಸೇನ್ ಸುದ್ದಿಯಾಗಿದ್ದಾರೆ.

ಸುಷ್ಮಿತಾ ಸೇನ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ, ಮಗಳು ಅಲಿಸಾಳ ಹೇರ್ ಕಟ್ ಮಾಡುತ್ತಿರುವ ಬಗ್ಗೆ ಪೋಸ್ಟ್ ಮಾಡಿದ್ದಾರೆ.

ಸುಷ್ಮಿತಾ ಸೇನ್ ಮತ್ತೋರ್ವ ಪುತ್ರಿ ರೀನಿ ಸೇನ್ ಈ ಚಿತ್ರವನ್ನು ತೆಗೆದಿದ್ದಾಳೆ. ಸೆಲೆಬ್ರಿಟಿ ತಾಯಿಯಾಗಿದ್ದರೂ, ಮಕ್ಕಳ ಕೆಲಸವನ್ನು ತಾವೇ ನಿರ್ವಹಿಸುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ.

ಅಲ್ಲದೆ, ಮಗಳ ಹೇರ್ ಡ್ರೆಸ್ಸಿಂಗ್ ಅನ್ನು ಅವಳು ಮೂರು ವರ್ಷದವಳಿದ್ದಾಗಿನಿಂದಲೂ ನಾನೇ ಮಾಡುತ್ತಿದ್ದೇನೆ ಎಂದು ಸುಷ್ಮಿತಾ ಹೇಳಿಕೊಂಡಿದ್ದಾರೆ.

ಸುಷ್ಮಿತಾ ಇನ್‌ಸ್ಟಾಗ್ರಾಂ ಪೋಸ್ಟ್ ವೈರಲ್ ಆಗಿದ್ದು, ಲಕ್ಷಾಂತರ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು