‘ಸಂಕಷ್ಟಕರ ಗಣಪತಿ’ ಸಿನಿಮಾ ಖ್ಯಾತಿಯ ನಟ ಲಿಖಿತ್ ಶೆಟ್ಟಿ, ತೇಜಸ್ವಿನಿ ಶರ್ಮಾ ಹಾಗೂ ಖುಷಿ ರವಿ ನಟಿಸಿರುವ ‘ಫುಲ್ ಮೀಲ್ಸ್’ ಚಿತ್ರ ನ.21ಕ್ಕೆ ತೆರೆಕಾಣುತ್ತಿದೆ. ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿದೆ.

ಬಹಳ ದಿನಗಳ ನಂತರ ಕನ್ನಡದಲ್ಲಿ ಫೋಟೊಗ್ರಾಫರ್ ಜೀವನದ ಕುರಿತಾದ ಕಥೆಯೊಂದು ಸಿನಿಮಾವಾಗಿ ತೆರೆಗೆ ಬರಲು ಸಿದ್ಧವಾಗಿದೆ. ವೆಡ್ಡಿಂಗ್ ಫೋಟೊಗ್ರಾಫರ್ ಒಬ್ಬನ ಸುತ್ತ ಸುತ್ತುವ ಕಥಾಹಂದರವನ್ನು ಹೊಂದಿರುವ ಈ ಸಿನಿಮಾ ರೊಮ್ಯಾಂಟಿಕ್ ಕಾಮಿಡಿ ಜಾನರ್ನಲ್ಲಿದೆ. ಎನ್.ವಿನಾಯಕ ಕಥೆ, ಚಿತ್ರಕಥೆ ಬರೆದು ಈ ಸಿನಿಮಾ ನಿರ್ದೇಶಿಸಿದ್ದಾರೆ.

ವೆಡ್ಡಿಂಗ್ ಫೋಟೊಗ್ರಾಫರ್ ಒಬ್ಬ ಪ್ರೀವೆಡ್ಡಿಂಗ್ ಶೂಟ್ಗೆಂದು ಹೋದಾಗ ಆ ಮದುವೆಯ ಹೆಣ್ಣಿಗೆ ಫೋಟೊಗ್ರಾಫರ್ ಮೇಲೆಯೇ ಪ್ರೀತಿ ಮೂಡುತ್ತದೆ. ಈ ಹಿನ್ನೆಲೆಯಲ್ಲಿ ಸೃಷ್ಟಿಯಾಗುವ ಪರಿಸ್ಥಿತಿಗಳೇ ಚಿತ್ರದ ಪ್ರಮುಖ ಕಥಾವಸ್ತು ಎಂದಿದೆ ಚಿತ್ರತಂಡ.

‘ಲಿಖಿತ್ ಶೆಟ್ಟಿ’ ಫೋಟೊಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಂಡರೆ, ‘ದಿಯಾ’ ಖ್ಯಾತಿಯ ಖುಷಿ ರವಿ ಮದುವೆ ಹೆಣ್ಣಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೇಕಪ್ ಹುಡುಗಿಯ ಪಾತ್ರದಲ್ಲಿ ತೇಜಸ್ವಿನಿ ಶರ್ಮಾ ನಟಿಸಿದ್ದು, ಇದೊಂದು ತ್ರಿಕೋನ ಪ್ರೇಮಕಥೆಯಾಗಿದೆ. ಗುರುಕಿರಣ್ ಸಂಗೀತ ನಿರ್ದೇಶನ, ದೀಪು ಎಸ್.ಕುಮಾರ್ ಸಂಕಲನ, ಮನೋಹರ್ ಜೋಷಿ ಛಾಯಾಚಿತ್ರಗ್ರಹಣ, ಹರೀಶ್ ಗೌಡ ಸಂಭಾಷಣೆ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅರ್ಜುನ್ ರಾಜ್ ಸಾಹಸ ನಿರ್ದೇಶನ, ಕವಿರಾಜ್ ಮತ್ತು ಪ್ರಮೋದ್ ಮರವಂತೆ ಸಾಹಿತ್ಯ ಚಿತ್ರಕ್ಕಿದೆ. ರಂಗಾಯಣ ರಘು, ಸೂರಜ್, ವಿಜಯ್ ಚಂಡೂರ್, ರವಿಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಹೊನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.