ಗುರುವಾರ , ಏಪ್ರಿಲ್ 22, 2021
22 °C

ವರುಣ್‌ ತೇಜ್‌ ’ಗನಿ’ ಮೋಷನ್‌ ಪೋಸ್ಟರ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವರುಣ್‌ ತೇಜ್‌ ಅವರ ಗನಿ ಚಿತ್ರದ ಮೋಷನ್‌ ಪೋಸ್ಟರ್‌ ಜ. 19ರಂದು ಬೆಳಿಗ್ಗೆ ಬಿಡುಗಡೆಯಾಗಿದೆ. ನಟ ರಾಮ್‌ಚರಣ್‌ ಈ ಪೋಸ್ಟರನ್ನು ಬಿಡುಗಡೆಗೊಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಈ ಮೋಷನ್‌ ಪೋಸ್ಟರ್‌ ಭರ್ಜರಿ ಸದ್ದು ಮಾಡಿದೆ. ಈ ಚಿತ್ರವನ್ನು ಕಿರಣ್‌ ಕೊರ್ರಪಟಿ ನಿರ್ದೇಶಿಸಿದ್ದಾರೆ. ಇದರಲ್ಲಿ ವರುಣ್‌ ತೇಜ್‌ ಬಾಕ್ಸರ್‌ ಆಗಿ ಕಾಣಿಸಿಕೊಂಡಿದ್ದಾರೆ. ಥಮನ್‌ ಅವರ ಸಂಗೀತವಿದೆ. ಈ ವರ್ಷ ಜುಲೈಯಲ್ಲಿ  ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ಚಿತ್ರ ತಂಡ ಯೋಜನೆ ಹಾಕಿಕೊಂಡಿದೆ. ಸಿದ್ದು ಮುದ್ದ ಮತ್ತು ಅಲ್ಲು ಬಾಬಿ ಈ ಚಿತ್ರ ನಿರ್ಮಿಸಿದ್ದಾರೆ.

ಚಿತ್ರಕ್ಕಾಗಿ ವರುಣ್‌ ತೇಜ್‌ ಅವರು ಅಮೆರಿಕದಲ್ಲಿ ಕಠಿಣ ತರಬೇತಿ ಪಡೆದಿದ್ದಾರೆ. ಬಾಲಿವುಡ್‌ ನಟಿ ಸಾಯಿ ಮಂಜ್ರೇಕರ್‌ ನಾಯಕಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮೋಷನ್‌ ಪೋಸ್ಟರ್‌ ವೀಕ್ಷಿಸಲು ಯುಟ್ಯೂಬ್‌ ಲಿಂಕ್‌:

ಇದನ್ನೂ ಓದಿ: 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು