ಶುಕ್ರವಾರ, ಮಾರ್ಚ್ 31, 2023
32 °C

ಪಠಾಣ್‌ ₹542 ಕೋಟಿ ಗಳಿಕೆ: ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಶಾರುಖ್‌

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅಭಿನಯದ ‘ಪಠಾಣ್‌’ಚಿತ್ರ ₹500 ಕೋಟಿ ಕ್ಲಬ್‌ ಸೇರಿದೆ. ಇದೇ ಖುಷಿಯಲ್ಲಿ ಸಾಕಷ್ಟು ಅಭಿಮಾನಿಗಳು ಭಾನುವಾರ ರಾತ್ರಿ ಶಾರೂಖ್‌ ಅವರ ಬಾಂದ್ರಾ ನಿವಾಸದ ಹೊರಗೆ ಸೇರಿದ್ದರು. ಮನೆಯ ಬಾಲ್ಕನಿಗೆ ಬಂದ ಶಾರುಖ್‌, ಅಭಿಮಾನಿಗಳತ್ತ ಕೈಬೀಸಿ ಶುಭ ಹಾರೈಸಿದರು.

ಚಿತ್ರ ಬಿಡುಗಡೆಗೊಂಡ 5ನೇ ದಿನಕ್ಕೆ ವಿಶ್ವದಾದ್ಯಂತ ₹542 ಕೋಟಿ ಗಳಿಸಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ ಈ ಚಿತ್ರ ಭಾರತದಲ್ಲಿ ಈಗಾಗಲೇ ₹335ಕೋಟಿ ಗಳಿಸಿದೆ. ಸಾಗರೋತ್ತರ ಗಳಿಕೆ ₹207 ಕೋಟಿ ತಲುಪಿದೆ. 

ಹಲವಾರು ಅಭಿಮಾನಿಗಳು ಕಿರುಚುತ್ತ, ತಮ್ಮ ಸ್ಮಾರ್ಟ್‌ಫೋನ್‌ನಿಂದ ಫೋಟೊ, ವಿಡಿಯೊಗಾಗಿ ನೆಚ್ಚಿನ ನಟನ ಮನೆಯ ಮುಂದೆ ಕಾಯುತ್ತಿದ್ದರು. ತಮ್ಮ ನಿವಾಸ 'ಮನ್ನತ್' ನ ಬಾಲ್ಕನಿಯಲ್ಲಿ ಕಾಣಿಸಿಕೊಂಡ ಬಾಲಿವುಡ್‌ ಬಾದ್‌ಶಾ, ಕೈ ಬೀಸಿ ಅಭಿಮಾನಿಗಳಿಗೆ 'ನಮಸ್ತೆ' ಮತ್ತು 'ಸಲಾಮ್' ಎಂದು ಸ್ವಾಗತಿಸಿದರು.  ದೂರದಿಂದಲೇ ಅಭಿಮಾನಿಗಳೊಡನೆ ಸಂವಾದ ನಡೆಸಿ ಶುಭ ಹಾರೈಸಿದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ಶಾರುಖ್‌, ಅಭಿಮಾನಿಗಳು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿರುವ ವಿಡಿಯೊ ಹಂಚಿಕೊಂಡಿದ್ದಾರೆ. ‘ಮೆಹಮಾನ್ ನವಾಜಿ ಪಠಾಣ್ ಕೆ ಘರ್ ಪರ್...’ ಎಂಬ ಪಠಾಣ್‌ ಚಿತ್ರದ ಜನಪ್ರಿಯ ಸಂಭಾಷಣೆಯನ್ನು ಉಲ್ಲೇಖಿಸಿ ಕೃತಜ್ಞತೆ ಸಲ್ಲಿಸಿದ್ದಾರೆ. ಭಾನುವಾರವನ್ನು ಅತ್ಯಂತ ಸಂತೋಷದಾಯಕವಾಗಿಸಿದ ನನ್ನೆಲ್ಲ ಅಭಿಮಾನಿಗಳಿಗೆ ಧನ್ಯವಾದಗಳು. ನಿಮ್ಮ ಪ್ರೀತಿಗೆ ಋಣಿ ಎಂದು ಬರೆದುಕೊಂಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು