ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಟ್ಟು– ಸಾವಿಗೆ ಗುಲಾಲ್‌ ಸಮ್ಮಿಲನ

Last Updated 28 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕ ಭಾಗದಲ್ಲಿ ಹುಟ್ಟು ಮತ್ತು ಸಾವಿನ ಸಂಕೇತವಾಗಿ ‘ಗುಲಾಲ್’ ಬಣ್ಣ ಬಳಸುವುದು ಸಂಪ್ರದಾಯ. ನೋವು– ನಲಿವಿನ ಸುತ್ತವೇ ‘ಗುಲಾಲ್‌.ಕಾಂ’ ಚಿತ್ರದ ಕಥೆ ಹೆಣೆಯಲಾಗಿದೆಯಂತೆ. ‘ಈ ಸಲ... ನಮ್ದೆ’ ಎಂಬ ಅಡಿಬರಹವೂ ಈ ಚಿತ್ರಕ್ಕಿದೆ.

ಶಿವು ಜಮಖಂಡಿ ಈ ಸಿನಿಮಾ ನಿರ್ದೇಶಿಸಿದ್ದಾರೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.

‘ನಮ್ಮ ಭಾಗದಲ್ಲಿ ಮಕ್ಕಳು ಹುಟ್ಟಿದಾಗ ಗುಲಾಲ್ ಬಣ್ಣ ಹಾರಿಸುತ್ತಾರೆ; ಸತ್ತಾಗ ಗೌರವ ಸಲ್ಲಿಸಲು ಈ ಬಣ್ಣವನ್ನೇ ಎರಚುತ್ತಾರೆ’ ಎಂದರು ಶಿವು.

‘ದೇವರು ಎಲ್ಲರಿಗೂ ಶಕ್ತಿ ಕೊಟ್ಟಿರುತ್ತಾನೆ. ಅದರ ಗುರುತಿಸುವಿಕೆಗೆ ಗುರು ಬೇಕು. ಕೋಲಾರ, ಬೆಂಗಳೂರು, ಕಲಬುರ್ಗಿ, ಹುಬ್ಬಳ್ಳಿ ಭಾಗದ ಹುಡುಗರಿಗೆ ಗುರುವೇ ಆದರ್ಶ. ಗುರುವನ್ನು ಆದರ್ಶವಾಗಿಟ್ಟುಕೊಂಡು ಆಲ್ಬಂ ಸಿದ್ಧಪಡಿಸುತ್ತಾರೆ. ಆ ಹಾಡುಗಳು ವೈರಲ್ ಆಗುತ್ತವೆ. ಅಲ್ಲಿಂದ ಕಥೆ ಶುರುವಾಗುತ್ತದೆ’ ಎಂದು ವಿವರಿಸಿದರು.

ಹಳೆಯ ಹಾಗೂ ಹೊಸ ತಲೆಮಾರಿನವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರಂತೆ. ಗುರುವಾಗಿ ತಬಲ ನಾಣಿ ಕಾಣಿಸಿಕೊಂಡಿದ್ದಾರೆ. ಹುಡುಗರಾಗಿ ದಿವಾಕರ್‌, ಸದಾನಂದ ಖಾಲಿ, ಮಲ್ಲೇಶ್‍ ಸೂರ್ಯ, ಶಂಕರ ಅಂಬಿಗೇರಿ, ಜೋಕರ್‌ ಹನುಮಂತು ನಟಿಸಿದ್ದಾರೆ.

ನೇತ್ರಾ, ಪೂಜಾ ಮೈಸೂರು, ಸೋನು ಪಾಟೀಲ್, ರಾಜೇಶ್ವರಿ, ಸೂರ್ಯವಂಶಿ ಈ ಚಿತ್ರದ ನಾಯಕಿಯರು. ಡಾ.ಗೋಪಾಲಕೃಷ್ಣ ಹವಾಲ್ದಾರ್‌ ಮತ್ತು ಧನಂಜಯ್‌ ಎಚ್. ಬಂಡವಾಳ ಹೂಡಿದ್ದಾರೆ. ಶಿವು ಜಮಖಂಡಿ ಅವರೇ ನಾಲ್ಕು ಹಾಡುಗಳನ್ನು ಬರೆದು ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ. ಛಾಯಾಗ್ರಹಣ ಮುಂಜಾನೆ ಮಂಜು ಅವರದು.ಬೆಂಗಳೂರು, ಬೆಳಗಾವಿ ಮತ್ತು ಕಿತ್ತೂರಿನ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಜನವರಿಗೆ ಜನರ ಮುಂದೆ ಬರಲು ಚಿತ್ರತಂಡ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT