ಗುರುವಾರ , ಆಗಸ್ಟ್ 5, 2021
22 °C

ನಾನು ಮದುವೆಯಾಗುತ್ತಿಲ್ಲ ಎಂದ ನಟಿ ಹನ್ಸಿಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡದ ‘ಬಿಂದಾಸ್’ ಸಿನಿಮಾದಲ್ಲಿ ನಟಿ ಹನ್ಸಿಕಾ ಮೋಟ್ವಾನಿ ಬಿಂದಾಸ್‌ ಆಗಿಯೇ ನಾಯಕನಿಗೆ ಪ್ರೀತಿಯ ಪಾಠ ಹೇಳಿದ್ದರು. ಕೊನೆಗೆ, ನಾಯಕನ ಸಾಹಸ ಮೆಚ್ಚಿ ಆತನ ಬೆಚ್ಚನೆಯ ಅಪ್ಪುಗೆಯಲ್ಲಿ ಬಂದಿಯಾಗಿದ್ದರು. ಪುನೀತ್‌ ರಾಜ್‌ಕುಮಾರ್ ನಾಯಕರಾಗಿದ್ದ ಈ ಚಿತ್ರದಲ್ಲಿ ಇಬ್ಬರ ಲವ್ ಕೆಮಿಸ್ಟ್ರಿ ರೀಲ್‌ ಜೀವನದಲ್ಲಿ ಸಖತ್‌ ಆಗಿಯೇ ವರ್ಕೌಟ್‌ ಆಗಿತ್ತು. ಈಗ ರಿಯಲ್‌ ಲೈಫ್‌ನಲ್ಲಿ ಹನ್ಸಿಕಾ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಮುಂಬೈ ಮೂಲದ ಉದ್ಯಮಿಯೊಬ್ಬರನ್ನು ಖಾಸಗಿಯಾಗಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದೆ. ಇದು ಆಕೆಯ ಸ್ನೇಹಿತರು ಮತ್ತು ಬಂಧುಗಳಲ್ಲಿ ಅಚ್ಚರಿ ಮೂಡಿಸಿತ್ತು. ಇದಕ್ಕೆ ಆಕೆಯೇ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದ್ದು, ‘ಇದೊಂದು ಸುಳ್ಳು ಸುದ್ದಿ. ಯಾರೊಬ್ಬರೂ ಇಂತಹ ಸುದ್ದಿಗಳಿಗೆ ಕಿವಿಗೊಡಬೇಡಿ’ ಎಂದಿದ್ದಾರೆ.

ಎರಡು ತಿಂಗಳ ಹಿಂದೆ ಹನ್ಸಿಕಾ ಯೂಟ್ಯೂಬ್‌ ಚಾನೆಲ್ ಆರಂಭಿಸಿದ್ದರು. ಅದರಲ್ಲಿ ಖಾಸಗಿ ವಿಷಯಗಳನ್ನು ಹಂಚಿಕೊಂಡಿದ್ದರು. ಜೊತೆಗೆ, ವೃತ್ತಿಬದುಕು ಮತ್ತು ವೈಯಕ್ತಿಕ ಬದುಕಿನ ವಿಡಿಯೊಗಳನ್ನು ಹಂಚಿಕೊಂಡಿದ್ದು ಉಂಟು.

ಈ ಹಿಂದೆ ಹನ್ಸಿಕಾ, ತಮಿಳು ನಟ ಶಿಂಬು ಅವರ ಪ್ರೇಮಪಾಶಕ್ಕೆ ಸಿಲುಕಿದ್ದರು. ಇದನ್ನು ಆಕೆಯೇ ಟ್ವಿಟರ್‌ ಮೂಲಕ  ನಾವಿಬ್ಬರೂ ಪ್ರೀತಿಸುತ್ತಿರುವುದಾಗಿ ಬಹಿರಂಗಪಡಿಸಿದ್ದು ಉಂಟು. ಕೊನೆಗೆ, ಮದುವೆಯಾದ ಬಳಿಕ ಸಿನಿಮಾಗಳಲ್ಲಿ ನಟಿಸಬಾರದೆಂದು ಶಿಂಬು ಅವರ ತಾಯಿ ಹನ್ಸಿಕಾಗೆ ಷರತ್ತು ವಿಧಿಸಿದ್ದರಂತೆ. ಹಾಗಾಗಿಯೇ, ಈ ಇಬ್ಬರ ಪ್ರೀತಿಗೆ ಬ್ರೇಕ್‌ ಬಿದ್ದಿತ್ತು.

ಪ್ರಸ್ತುತ ಹನ್ಸಿಕಾ ತಮಿಳಿನ ‘ಮಹಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಆಕೆಯ ವೃತ್ತಿಬದುಕಿನ ಐವತ್ತನೇ ಸಿನಿಮಾ. ಇದಕ್ಕೆ ಯು.ಆರ್. ಜಮೀಲ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಅಂದಹಾಗೆ ‘ಪಾರ್ಟ್‌ನರ್‌’ ಎಂಬ ಮತ್ತೊಂದು ತಮಿಳು ಚಿತ್ರದಲ್ಲೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಕೊರೊನಾ ಲಾಕ್‌ಡೌನ್‌ ಪರಿಣಾಮ ಇದರ ಶೂಟಿಂಗ್‌ ಸ್ಥಗಿತಗೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು