ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ‘ಹೀರೋ’ ಟ್ರೈಲರ್ ಬಿಡುಗಡೆ

Last Updated 13 ಜನವರಿ 2021, 8:56 IST
ಅಕ್ಷರ ಗಾತ್ರ

ರಿಷಬ್‌ ಶೆಟ್ಟಿಯವರ ನಟನೆ ಮತ್ತು ನಿರ್ಮಾಣದ ‘ಹೀರೋ’ ಚಿತ್ರದ ಟ್ರೈಲರ್‌ ಇದೇ ಸಂಕ್ರಾಂತಿಯಂದು ಬೆಳಿಗ್ಗೆ 10 ಗಂಟೆಗೆ ಯ್ಯೂಟೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಫಸ್ಟ್‌ಲುಕ್‌, ಟೀಸರ್‌ನಿಂದ ಈಗಾಗಲೇ ಸಿನಿಪ್ರಿಯರ ಗಮನವನ್ನೂ ಸೆಳೆದಿದೆ.

ಚಿತ್ರಪೂರ್ಣಗೊಂಡು ಬಿಡುಗಡೆಯ ಹೊಸ್ತಿಲಿಗೆ ಬಂದಿರುವ ಖುಷಿಯನ್ನು ಹಂಚಿಕೊಳ್ಳಲು ರಿಷಬ್‌ ಶೆಟ್ಟಿ ಚಿತ್ರತಂಡದೊಂದಿಗೆ ಬುಧವಾರ ಸುದ್ದಿಗೋಷ್ಠಿಗೆ ಹಾಜರಾಗಿದ್ದರು.

‘ಇದು ಲಾಕ್‌ಡೌನ್‌ ಅವಧಿಯಲ್ಲಿ ಸಂಪೂರ್ಣ ಚಿತ್ರೀಕರಣ ಮಾಡಿದ ಚಿತ್ರವಿದು. ಕೇವಲ 24 ಮಂದಿಯ ಚಿತ್ರತಂಡದೊಂದಿಗೆ ಜುಲೈ 7ರಂದು ಚಿಕ್ಕಮಗಳೂರಿನ ನಿಸರ್ಗ ತಾಣದಲ್ಲಿ ಚಿತ್ರೀಕರಣ ಆರಂಭಿಸಿದ್ದೆವು. ಈ ತಂಡದಲ್ಲಿ ಅತ್ಯುತ್ತಮ ತಂತ್ರಜ್ಞರು ಇದ್ದು, ನೂರು ಜನರು ಮಾಡುವ ಕೆಲಸವನ್ನು 24 ಮಂದಿಯೇ ಮಾಡಿ ಮುಗಿಸಿದೆವು. ಇದರಲ್ಲಿ ಒಬ್ಬರು ಇರಲಿಲ್ಲವೆಂದರೂ ‘ಹೀರೊ’ ಚಿತ್ರವೇ ಆಗುತ್ತಿರಲಿಲ್ಲ’ ಎಂದು ಮಾತಿಗಾರಂಭಿಸಿದರು.

ಈ ಚಿತ್ರಕ್ಕೆ ಭರತ್‌ರಾಜ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈ ರೀತಿಯೂ ಚಿತ್ರ ಮಾಡಬಹುದು ಎನ್ನುವ ಪರಿಕಲ್ಪನೆ ಕೂಡ ಅವರದೇ. ರಿಷಬ್‌ ಶೆಟ್ಟಿಯ ಚಿತ್ರಕ್ಕೆ ಇದೊಂದು ಹೊಸ ರೀತಿಯ ಅಪ್ರೋಚ್‌. ಸಾಮಾಜಿಕ ಕಾಳಜಿ, ಆಂಥೋಲಜಿ, ಫೀಲ್‌ಗುಡ್‌ ಫ್ಯಾಕ್ಟರ್‌ ಇಂಥ ಸಬ್ಜೆಕ್ಟ್‌ಗಳನ್ನು ನಾವು ಟಚ್‌ ಮಾಡಿದ್ದೆವು. ಆ್ಯಕ್ಷನ್‌, ಕಾಮಿಡಿ, ಥ್ರಿಲ್ಲರ್‌ ಹಾಗೂ ಒಂದಿಷ್ಟು ವೈಲೆನ್ಸ್‌ ಅಂಶಗಳಿರುವ ಚಿತ್ರವನ್ನು ನಾವು ಮಾಡಿರಲಿಲ್ಲ. ಈ ಬಾರಿ ಆ ಎಲ್ಲ ಅಂಶಗಳನ್ನು ‘ಹೀರೋ’ದಲ್ಲಿ ಕಟ್ಟಿಕೊಟ್ಟಿದ್ದೇವೆ. ಎಲ್ಲಕ್ಕಿಂತ ಹೆಚ್ಚಿನದಾಗಿ ಇದೊಂದು ಪಕ್ಕಾ ಕಮರ್ಷಿಯಲ್‌ ಸಿನಿಮಾ ಎಂದು ಮಾತು ವಿಸ್ತರಿಸಿದರು.

‘ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಇಂಥದ್ದೊಂದು ಕಮರ್ಷಿಯಲ್‌ ಸಿನಿಮಾ ಮಾಡಲು ಸಾಧ್ಯವೆಂಬ ಆತ್ಮವಿಶ್ವಾಸದಲ್ಲಿ ಈ ಚಿತ್ರವನ್ನು ನಾವು ಕೈಗೆತ್ತಿಕೊಂಡಿದ್ದೆವು. ಒಂದು ಪರಿಪೂರ್ಣ ಚಿತ್ರತಂಡದೊಂದಿಗೆ 43 ದಿನಗಳ ಕಾಲ ಚಿತ್ರೀಕರಣ ಮಾಡಿದೆವು. ಈ ಚಿತ್ರಕ್ಕೆ ರಿಷಭ್‌ ಶೆಟ್ಟಿ ಫಿಲಂಸ್‌ ಬ್ಯಾನರ್‌ನಡಿ ಬಂಡವಾಳ ಹೂಡಿರುವೆ’ ಎನ್ನುವ ಮಾತು ಸೇರಿಸಿದರು.

ಕಥೆ ಮತ್ತು ಪಾತ್ರದ ಬಗ್ಗೆ ಹೇಳುವುದಾದರೆ, ಇದು ಒಂದು ದಿನದಲ್ಲಿ ನಡೆಯುವ ಕಥೆ. ನನ್ನದು ಬಾರ್ಬರ್‌ ಪಾತ್ರ. ತುಂಬಾ ಹೇರ್‌ಸ್ಟೈಲಿಸ್ಟ್‌ ಪಾತ್ರ. ಇದು ನನಗೆ ತುಂಬಾ ಖುಷಿ ಕೊಟ್ಟ ಪಾತ್ರ ಕೂಡ. ಈ ಪಾತ್ರಕ್ಕೆ ಯಾವುದೇ ಹೀರೊಯಿಸಂ ಇಲ್ಲ. ಕಥೆಯೇ ಟೈಟಲ್‌ಗೆ ನ್ಯಾಯ ಒದಗಿಸುತ್ತದೆ. ಹಾಗೆಯೇ ನನಗೆ ತುಂಬಾ ಸವಾಲೊಡ್ಡಿದ ಪಾತ್ರವೂ ಹೌದು’ ಎನ್ನಲು ಅವರು ಮರೆಯಲಿಲ್ಲ.

‘ಚಿತ್ರವನ್ನು ಈಗಾಗಲೇ ಸೆನ್ಸಾರ್‌ಗೆ ಸಲ್ಲಿಸಿದ್ದೇವೆ. ಇನ್ನು ಒಂದು ವಾರ ಅಥವಾ ಹತ್ತು ದಿನಗಳಲ್ಲಿ ಸೆನ್ಸಾರ್‌ ಆಗುವ ನಿರೀಕ್ಷೆ ಇದೆ. ಫೆಬ್ರುವರಿಯಲ್ಲಿ ಚಿತ್ರ ಬಿಡುಗಡೆಗೆ ನಿರ್ಧರಿಸಿದ್ದೇವೆ. ಚಿತ್ರಮಂದಿರದಲ್ಲಿ ಶೇ 50ರಷ್ಟು ಆಸನಗಳ ಭರ್ತಿಗಷ್ಟೇ ಅವಕಾಶವಿದ್ದರೂ ಚಿತ್ರಮಂದಿರಗಳಲ್ಲೇ ಚಿತ್ರ ಬಿಡುಗಡೆ ಮಾಡುವ ನಿರ್ಧಾರ ನಮ್ಮದು. ಟ್ರೈಲರ್‌ಗೆ ಬರುವ ಪ್ರತಿಕ್ರಿಯೆ ಮತ್ತು ಪರಿಸ್ಥಿತಿ ನೋಡಿ ಚಿತ್ರ ಬಿಡುಗಡೆಯ ದಿನಾಂಕ ಪ್ರಕಟಿಸಲಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT