ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್, ರಿತೇಶ್ ದೇಶ್ಮುಖ್, ಜಾಕ್ವೆಲಿನ್ ಫರ್ನಾಂಡೀಸ್ ನಟನೆಯ ‘ಹೌಸ್ಫುಲ್–5’ ಹಾಸ್ಯ ಚಿತ್ರ ಬಿಡುಗಡೆಯಾದ ಎರಡೇ ದಿನಕ್ಕೆ ₹56.73 ಕೋಟಿ ಗಳಿಸಿದೆ ಎಂದು ಚಿತ್ರ ತಂಡ ಭಾನುವಾರ ಹೇಳಿದೆ.

ತರುಣ್ ಮನ್ಸುಖನಿ ನಿರ್ದೇಶನದಲ್ಲಿ, ಸಾಜಿದ್ ನಾದಿಯಾವಾಲಾ ನಿರ್ಮಾಣದಲ್ಲಿ ಚಿತ್ರ ತಯಾರಾಗಿದೆ. ಕಳೆದ ಶುಕ್ರವಾರ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಂಡಿದೆ.

ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಕುರಿತು ಮಾಹಿತಿ ಹಂಚಿಕೊಂಡಿರುವ ಚಿತ್ರ ತಂಡ, ಮೊದಲನೇ ದಿನ ₹24.53 ಕೋಟಿ ಹಾಗೂ ಎರಡನೇ ದಿನ ₹32.38 ಕೋಟಿ ಗಳಿಕೆ ಮಾಡಿದೆ. ಒಟ್ಟಾರೆ ಚಿತ್ರ ಬಿಡುಗಡೆಯಾದ ಎರಡು ದಿನದಲ್ಲಿ ₹56.73 ಕೋಟಿ ಗಳಿಸಿದೆ ಎಂದು ಮಾಹಿತಿ ಹಂಚಿಕೊಂಡಿದೆ.

ಸೌಂದರ್ಯ ಶರ್ಮಾ, ಜಾಕಿ ಶ್ರಾಫ್, ಸಂಜಯ್ ದತ್, ಅಭಿಷೇಕ್ ಬಚ್ಚನ್ ಸೇರಿ ಹಲವರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಹೌಸ್ಫುಲ್ ಸರಣಿಯ ಮೊದಲ ಸಿನಿಮಾ 2010ರಲ್ಲಿ ತೆರೆಕಂಡಿತ್ತು. ನಂತರ, 2012, 2016, 2019ರಲ್ಲಿ ಮೂರು ಚಿತ್ರಗಳು ಬಿಡುಗಡೆಯಾಗಿದ್ದವು. ಇದೀಗ, ಹೌಸ್ಫುಲ್-5 ಬಿಡುಗಡೆಯಾಗಿದೆ.
.ಬಾಲಿವುಡ್ನ ಬಹುನಿರೀಕ್ಷಿತ ‘ಹೌಸ್ಫುಲ್ 5’ ಟ್ರೇಲರ್ ಬಿಡುಗಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.