ಒಬ್ಬರಂತೂ ನೀವು ಮರಳುವಿರಿ ಎಂಬ ವಿಶ್ವಾಸವಿದೆ ಎಂದು ಸಂದೇಶ ಕಳುಹಿಸಿದ್ದರಂತೆ. ಅದಕ್ಕೆ ಪ್ರತಿಯಾಗಿ, ನಾನೆಲ್ಲಿ ಹೋಗಿರುವೆ? ಮರಳುವುದು ಅಂದ್ರೇನು? ಬಾಕ್ಸಾಫೀಸಿನ ಸೋಲುಗೆಲುವುಗಳ ಕುರಿತು ನಾನೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಹೀಗಾಗುವುದು ಸಹಜ. ನಾನು ಇನ್ನು ಮೇಲೆಯೂ ಬಾಲಿವುಡ್‌ನಲ್ಲಿ ಕೆಲಸ ಮಾಡುವೆ. ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುವೆ. ನಂಗಿನ್ನೂ 56 ವರ್ಷ. ಮೈಮುರಿದು ದುಡಿಯುವೆ ಎಂದೆಲ್ಲ ಅಕ್ಷಯ್ ಕುಮಾರ್ ಹೇಳಿಕೊಂಡಿದ್ದಾರೆ.