ಸೋಮವಾರ, ಮಾರ್ಚ್ 27, 2023
32 °C

ನಾಗಾರ್ಜುನ ಮನೆಯಲ್ಲಿ ಅಮೀರ್‌ ಖಾನ್‌ ಪಾರ್ಟಿ: ಸಮಂತಾ ಎಲ್ಲಿ ಎಂದ ನೆಟ್ಟಿಗರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗಚೈತನ್ಯ ನಟನೆಯ ಲವ್‌ ಸ್ಟೋರಿ ಸಿನಿಮಾದ ಪ್ರಿ ರಿಲೀಸ್‌ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟ ಅಮೀರ್‌ ಖಾನ್‌ ಭಾಗಿಯಾಗಿದ್ದರು. ಆದರೆ ಪತ್ನಿ ಸಮಂತಾ ಗೈರಾಗಿದ್ದು ಎದ್ದು ಕಾಣುತ್ತಿತ್ತು. 

ಅಮೀರ್‌ ಖಾನ್‌ ವಿಶೇಷ ಅತಿಥಿಯಾಗಿ ಹಾಜರಿದ್ದರು. ಸಾಯಿ ಪಲ್ಲವಿ, ನಾಗಾರ್ಜುನ, ನಿರ್ದೇಶಕ ಶೇಖರ್‌ ಕಮ್ಮುಲ ಸೇರಿದಂತೆ ಹಲವರು ಪ್ರಿ ರಿಲೀಸ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಬಳಿಕ ಅಮೀರ ಖಾನ್‌ ಅವರು ನಾಗಾರ್ಜುನ ಅವರ ಮನೆಗೆ ಭೇಟಿ ನೀಡಿದ್ದರು. 

ನಾಗಾರ್ಜುನ ಮನೆಯಲ್ಲಿ ನಿರ್ದೇಶಕ ಶೇಖರ್‌ ಕಮ್ಮುಲ, ನಟಿ ಸಾಯಿ ಪಲ್ಲವಿ, ನಾಗಚೈತನ್ಯ ಅವರು ಅಮೀರ್‌ ಖಾನ್‌ ಜೊತೆ ಪಾರ್ಟಿ ಮಾಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಪ್ರಿ ರಿಲೀಸ್‌ ಕಾರ್ಯಕ್ರಮಕ್ಕೆ ಗೈರಾಗಿದ್ದ ಸಮಂತಾ, ಕನಿಷ್ಠ ಪಕ್ಷ ಮನೆಯಲ್ಲಿ ಆದರೂ ಇರಬೇಕಲ್ಲ? ಸಮಂತಾ ಎಲ್ಲಿ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. 

ನಾಗಾರ್ಜುನ ಅಕ್ಕಿನೇನಿ ಕುಟುಂಬದ ಜೊತೆ ಆಮೀರ್ ಖಾನ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಗಚೈತನ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು