ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬಂದ ‘ಇನ್‌ಸ್ಪೆಕ್ಟರ್‌ ವಿಕ್ರಂ’

Published 8 ಫೆಬ್ರುವರಿ 2024, 23:30 IST
Last Updated 8 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅವರ ಸಿನಿಬ್ಯಾಂಕ್‌ ತಿಂಗಳುಗಳು ಉರುಳಿದಂತೆ ಹಿಗ್ಗುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ‘ಕವಲುದಾರಿ’, ‘ಸಪ್ತ ಸಾಗರದಾಚೆ ಎಲ್ಲೋ’ ಖ್ಯಾತಿಯ ಹೇಮಂತ್‌ ರಾವ್‌ ನಿರ್ದೇಶನದ ಹೊಸ ಸಿನಿಮಾಗೆ ಹಸಿರು ನಿಶಾನೆ ನೀಡಿದ್ದ ಹ್ಯಾಟ್ರಿಕ್‌ ಹೀರೊ ಇದೀಗ ‘ಇನ್‌ಸ್ಪೆಕ್ಟರ್‌ ವಿಕ್ರಂ’ ಆಗಿ ಮತ್ತೊಮ್ಮೆ ತೆರೆ ಮೇಲೆ ಬರಲಿದ್ದಾರೆ. 

1989ರಲ್ಲಿ ಬಿಡುಗಡೆ ಆಗಿದ್ದ ‘ಇನ್ಸ್‌ಪೆಕ್ಟರ್‌ ವಿಕ್ರಂ’ ಸಿನಿಮಾ ಶಿವರಾಜ್‌ಕುಮಾರ್‌ ಅವರ ಸಿನಿಪಯಣದಲ್ಲಿ ವಿಶೇಷ ಸಿನಿಮಾವಾಗಿತ್ತು. ಅಂದು ಆ ಸಿನಿಮಾ ಹಿಟ್‌ ಆಗಿತ್ತು. 34 ವರ್ಷಗಳ ಹಿಂದೆ ದಿನೇಶ್‌ ಬಾಬು ಈ ಸಿನಿಮಾ ನಿರ್ದೇಶಿಸಿದ್ದರು. ಇದೀಗ ‘ಐವಿ ರಿಟರ್ನ್ಸ್’(ಇನ್‌ಸ್ಪೆಕ್ಟರ್‌ ವಿಕ್ರಂ ರಿಟರ್ನ್ಸ್‌) ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಅವರ ಸೋದರ ಸಂಬಂಧಿ ಲಕ್ಕಿ ಗೋಪಾಲ್‌ ನಿರ್ದೇಶನದ ಕ್ಯಾಪ್‌ ತೊಟ್ಟಿದ್ದಾರೆ. ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಖಾಕಿ ಖದರ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ಮೈಲಾರಿ ಎಂ. ಹಣ ಹೂಡುತ್ತಿದ್ದಾರೆ. ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸ ಮುಗಿದಿದ್ದು, ಶೀಘ್ರದಲ್ಲೇ ಇನ್‌ಸ್ಪೆಕ್ಟರ್‌ ವಿಕ್ರಂ ರಿಟರ್ನ್ಸ್‌ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.  

‘ಐವಿ ರಿರ್ಟನ್ಸ್’ನಲ್ಲಿ ಹೆಸರಾಂತ ತಂತ್ರಜ್ಞರು ಕೆಲಸ ಮಾಡಲಿದ್ದಾರೆ. ತಮಿಳಿನ ಸಂಗೀತ ನಿರ್ದೇಶಕ ಅಮ್ರಿಷ್ ಹಾಡುಗಳನ್ನು ಕಂಪೋಸ್‌ ಮಾಡಿದ್ದಾರೆ. ‘ರುಸ್ತುಂ’, ‘ಘೋಸ್ಟ್’ ಚಿತ್ರದ ಖ್ಯಾತಿಯ ಮಹೇನ್ ಸಿಂಹ ಛಾಯಾಚಿತ್ರಗ್ರಹಣ ಸಿನಿಮಾಗಿದೆ. ದೀಪು ಎಸ್. ಕುಮಾರ್ ಸಂಕಲನ, ವಿದ್ಯಾಧರಣ್ ಕಥೆ ಚಿತ್ರಕ್ಕಿದೆ. ಮಾಸ್ತಿ ಅವರ ಸಂಭಾಷಣೆ, ಚೇತನ್ ಡಿಸೋಜಾ ಅವರ ಸಾಹಸ ನಿರ್ದೇಶನ ಚಿತ್ರಕ್ಕೆ ರಂಗು ತುಂಬಲಿದೆ ಎಂದಿದೆ ಚಿತ್ರತಂಡ. 

ಶಿವರಾಜ್‌ಕುಮಾರ್
ಶಿವರಾಜ್‌ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT