ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗ್ ಬಾಸ್ ಜೋಡಿಯ ಅರ್ಧಂಬರ್ಧ ಪ್ರೇಮಕಥೆ?

Last Updated 29 ಸೆಪ್ಟೆಂಬರ್ 2022, 5:51 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‌ಬಾಸ್‌ ಖ್ಯಾತಿಯ ದಿವ್ಯಾ ಉರುಡುಗ–ಬೈಕ್‌ ರೇಸರ್‌ ಅರವಿಂದ್‌ ಜೋಡಿಯ ಕುರಿತು ಗೊತ್ತಿಲ್ಲದವರು ವಿರಳ. ಬಿಗ್‌ಬಾಸ್‌–8ರಿಂದ ಜೊತೆಯಾದ ಇವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರು. ಪ್ರಸ್ತುತ ದಿವ್ಯಾ ಸೀಸನ್‌–9 ರಲ್ಲಿಯೂ ಬಿಗ್‌ಬಾಸ್‌ ಮನೆ ಪ್ರವೇಶಿಸಿದ್ದು, ಅವರನ್ನು ಮನೆಗೆ ಬೀಳ್ಕೊಡಲು ಅರವಿಂದ್‌ ಕೂಡ ಬಂದಿದ್ದರು.‌ ಇಂಥ ಜೋಡಿ ’ಅರ್ಧಂಬರ್ಧ ಪ್ರೇಮಕಥೆ’ ಎಂಬ ಹೊಸ ಚಿತ್ರದಲ್ಲಿ ಜೊತೆಯಾಗುತ್ತಿದೆಯಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಹೀಗೆ ಪ್ರಶ್ನೆ ಮೂಡಲು ಬಲವಾದ ಕಾರಣವಿದೆ. ನಿರ್ದೇಶಕ ಅರವಿಂದ್ ಕೌಶಿಕ್ ಚಿತ್ರದ ಟೀಸರ್ ಒಂದನ್ನು ಅನಾವರಣ ಮಾಡಿದ್ದು, ಅದರಲ್ಲಿ ನಾಯಕ ಯಾರು ಎಂಬುದನ್ನು ಗೌಪ್ಯವಾಗಿ ಇಡಲಾಗಿದೆ. ನಾಯಕನ ಪರಿಚಯಿಸುವ ಪ್ರತ್ಯೇಕ ವಿಡಿಯೊ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.

ತುಘ್ಲಕ್, ನಮ್ ಏರಿಯಾಲ್ ಒಂದಿನ, ಹುಲಿರಾಯ ಸಿನಿಮಾಗಳಿಂದ ಹೆಸರು ಮಾಡಿದ ಅರವಿಂದ್‌ ಕೌಶಿಕ್‌ ಬಣ್ಣದ ಜಗತ್ತಿಗೆ ಹೊಸ ಪ್ರತಿಭೆಗಳನ್ನು ಪರಿಚಯಿಸಿದವರು. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಚಿತಾರಾಮ್, ಅನೀಶ್, ಬಾಲು ನಾಗೇಂದ್ರ ಸೇರಿದಂತೆ ಸಾಕಷ್ಟು ಪ್ರತಿಭಾವಂತರು ಇವರ ಗರಡಿಯಿಂದ ಬಂದವರು. ಹೀಗಾಗಿ ಈ ಸಲ ಕೆ.ಪಿ ಅರವಿಂದ್‌ ಅವರನ್ನು ಸಿನಿಮಾಕ್ಕೆ ತರುವ ಪ್ರಯತ್ನದಲ್ಲಿ ಇರಬಹುದಾ ಎಂಬ ಸಣ್ಣ ಅನುಮಾನವಿದೆ. ಆದಾಗ್ಯೂ ಚಿತ್ರತಂಡ ಈ ಬಗ್ಗೆ ಗುಟ್ಟು ಬಿಟ್ಟುಕೊಡುತ್ತಿಲ್ಲ. ಕಾದು ನೋಡಿ ಎನ್ನುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT