ಶುಕ್ರವಾರ, ಜುಲೈ 23, 2021
24 °C

ಜಗ್ಗೇಶ್‌ ನನ್ನ ಇಷ್ಟದ ಆಂಜನೇಯ ಎಂದಿದ್ದ ರಾಜಕುಮಾರ್‌ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿತ್ರರಂಗದ ಕುರಿತ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸದಾ ಹಂಚಿಕೊಳ್ಳುವ ಜಗ್ಗೇಶ್‌ ಅವರು, ಇತ್ತೀಚೆಗೆ ರಾಜ್‌ ಅವರ ಕುರಿತ ನೆನಪೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಬಿಚ್ಚಿಟ್ಟಿದ್ದಾರೆ. 

ತೆಲುಗು ಚಿತ್ರರಂಗದ ದಿಗ್ಗಜ ನಾಗೇಶ್ವರ್‌ ರಾವ್‌, ಕನ್ನಡದ ಮೇರು ನಟ ಡಾ. ರಾಜ್‌ಕುಮಾರ್‌ ಅವರೊಂದಿಗೆ ಜಗ್ಗೇಶ್‌ ಇರುವ ಚಿತ್ರವೊಂದನ್ನು ಅವರ ಅಭಿಮಾನಿಯೊಬ್ಬರು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಜಗ್ಗೇಶ್‌ ತಮ್ಮ ನೆನಪಿನಾಳಕ್ಕೆ ಜಾರಿದ್ದಾರೆ. 

 
 
 
 

 
 
 
 
 
 
 
 
 

ಆಕಸ್ಮಿಕ ಜಾಲತಾಣದ ಮಿತ್ರ ಹಂಚಿಕೊಂಡ ನಾನು ನೋಡಿರದ ಚಿತ್ರ! ತುಂಬ ಸಂತೋಷ ನೀಡಿತು!1996/97 ಇರಬಹುದು ಎಂದು ಭಾವಿಸುವೆ ಸರಿಯಾಗಿ ನೆನಪಿಲ್ಲಾ! ಆದರೆ ಅಣ್ಣ ನನ್ನ ಶ್ರೀನಾಗೇಶ್ವರ ರಾವ್ ರವರಿಗೆ ಪರಿಚಯಿಸಿದ ರೀತಿ ನೆನಪಿದೆ ಧಣಿ ಈತ ಜಗ್ಗೇಶ ಅಂತ ಬಹಳ ಪ್ರತಿಭಾವಂತ ನಟ ಜೊತೆಗೆ ನನ್ನ ಇಷ್ಟದ ಆಂಜನೇಯ ಎಂದುಬಿಟ್ಟರು! ಆಗ ನಾಗೇಶ್ವರ ರಾಯರು ಹೀಗೆ ಹಿರಿಯರ ಪ್ರೀತಿ ಗಳಿಸುವುದು ಒಂದು ತಪಸ್ಸು ಎಂದರು! ಇಂಥ ದಿಗ್ಗಜರ ನಡುವೆ ಬೆಳೆದ ಮಾಯಸಂದ್ರ ಪಕ್ಕದ ಸಣ್ಣಗ್ರಾಮದ ಹುಡುಗ ಎಂಥ ಅದೃಷ್ಟವಂತ ಅನ್ನಿಸಿತು! ಇಂಥ ಮಹನೀಯರ ಗುಣನಡತೆ ನನ್ನ ರಕ್ತದಲ್ಲಿ ಬೆರತಿದೆ ಕೊನೆ ಉಸಿರಿನವರೆಗೆ ನನ್ನ ಗುಣವಾಗಿರುತ್ತದೆ! ಗುರುಭ್ಯೋನಮಃ...

A post shared by 𝐉𝐀𝐆𝐆𝐄𝐒𝐇 𝐒𝐇𝐈𝐕𝐀𝐋𝐈𝐍𝐆𝐀𝐏𝐏𝐀 (@actor_jaggesh) on

‘ಜಾಲತಾಣದ ಮಿತ್ರನೊಬ್ಬ ಹಂಚಿಕೊಂಡಿದ್ದ ನಾನು ನೋಡಿರದ ಚಿತ್ರ ಇದು. ಚಿತ್ರ ತುಂಬ ಸಂತೋಷ ನೀಡಿತು. ಇದು  1996/97 ಇರಬಹುದು ಎಂದು ಭಾವಿಸುವೆ. ಆದರೆ ಸರಿಯಾಗಿ ನೆನಪಿಲ್ಲ. ಆದರೆ, ಅಣ್ಣ (ರಾಜಕುಮಾರ್‌) ನನ್ನನ್ನು ನಾಗೇಶ್ವರ ರಾವ್ ರವರಿಗೆ ಪರಿಚಯಿಸಿದ ರೀತಿ ನೆನಪಿದೆ ‘ಧಣಿ, ಈತ ಜಗ್ಗೇಶ ಅಂತ. ಬಹಳ ಪ್ರತಿಭಾವಂತ ನಟ. ಜೊತೆಗೆ ನನ್ನ ಇಷ್ಟದ ಆಂಜನೇಯ ಎಂದುಬಿಟ್ಟರು. ಆಗ ನಾಗೇಶ್ವರ ರಾಯರು ಹೀಗೆ ಹಿರಿಯರ ಪ್ರೀತಿ ಗಳಿಸುವುದು ಒಂದು ತಪಸ್ಸು ಎಂದರು,’ ಎಂದು ಜಗ್ಗೇಶ್‌ ಹೇಳಿದ್ದಾರೆ.  

‘ಇಂಥ ದಿಗ್ಗಜರ ನಡುವೆ ಬೆಳೆದ ಮಾಯಸಂದ್ರ ಪಕ್ಕದ ಸಣ್ಣಗ್ರಾಮದ ಹುಡುಗ ಎಂಥ ಅದೃಷ್ಟವಂತ ಅನ್ನಿಸಿತು. ಇಂಥ ಮಹನಿಯರ ಗುಣನಡತೆ ನನ್ನ ರಕ್ತದಲ್ಲಿ ಬೆರತಿದೆ. ಕೊನೆ ಉಸಿರಿನವರೆಗೆ ನನ್ನ ಗುಣವಾಗಿರುತ್ತದೆ,’ ಎಂದು ಅವರು ಬರೆದುಕೊಂಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು