ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಲಾಜ್‌ ಚಿತ್ರ ಜುಲೈ 5ರಂದು ತೆರೆಗೆ: ಐಎಫ್‌ಎಸ್‌ ಅಧಿಕಾರಿಯಾಗಿ ಜಾಹ್ನವಿ ಕಪೂರ್‌

Published 17 ಏಪ್ರಿಲ್ 2024, 11:04 IST
Last Updated 17 ಏಪ್ರಿಲ್ 2024, 11:04 IST
ಅಕ್ಷರ ಗಾತ್ರ

ಮುಂಬೈ: ನಟಿ ಜಾಹ್ನವಿ ಕಪೂರ್‌ ಅಭಿನಯದ ‘ಉಲಾಜ್‌‘ ಚಿತ್ರವು ಇದೇ ಜುಲೈ 5ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೊಡಕ್ಷನ್‌ ಹೌಸ್‌ ‘ಜಂಗ್ಲಿ ಪಿಚ್ಚರ್ಸ್‌‘ ಚಿತ್ರದ ಟೀಸರ್‌ ಹಂಚಿಕೊಂಡು ಮಾಹಿತಿ ನೀಡಿದೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸುಧಾಂಶು ಸರಿಯಾ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ದೇಶಭಕ್ತಿ ಹಾಗೂ ಥ್ರಿಲ್ಲರ್‌ ಕಥಾ‌ಹಂದರ ಹೊಂದಿರುವ ಈ ಚಿತ್ರದಲ್ಲಿ ನಟಿ ಜಾಹ್ನವಿ ಕಪೂರ್‌ ಐಎಫ್‌ಎಸ್‌ (ಭಾರತೀಯ ವಿದೇಶಾಂಗ ಸೇವೆ) ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ದೇಶಭಕ್ತ ಕುಟುಂಬದಲ್ಲಿ ಜನಿಸಿದ ಮಹಿಳೆಯು ಐಎಫ್‌ಎಸ್‌ ಅಧಿಕಾರಿಯಾಗಿ ವಿದೇಶದಲ್ಲಿ ಕೆಲಸ ನಿರ್ವಹಿಸುವ ವೇಳೆ ಎದುರಾಗುವ ಸಮಸ್ಯೆಗಳು ಹಾಗೂ ಅದನ್ನು ಮೆಟ್ಟಿ ನಿಲ್ಲುವ ಆಕೆಯ ಧೈರ್ಯ ಈ ಎಲ್ಲಾ ಅಂಶಗಳನ್ನು ಚಿತ್ರದಲ್ಲಿ ಕಾಣಬಹುದಾಗಿದೆ.

ಗುಲ್ಶನ್ ದೇವಯ್ಯ ಹಾಗೂ ರೋಷನ್ ಮ್ಯಾಥ್ಯೂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆದಿಲ್ ಹುಸೇನ್, ರಾಜೇಶ್ ತೈಲಂಗ್, ಮೇಯಾಂಗ್ ಚಾಂಗ್, ರಾಜೇಂದ್ರ ಗುಪ್ತಾ ಹಾಗೂ ಜಿತೇಂದ್ರ ಜೋಶಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹಿಂದಿ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT