ಶನಿವಾರ, ಅಕ್ಟೋಬರ್ 31, 2020
20 °C

‘ಭೂಮಿ’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಲಿವುಡ್‌ನ ಖ್ಯಾತ ನಟ ಜಯಂ ರವಿ ಅಭಿನಯದ ಮುಂದಿನ ಚಿತ್ರ ‘ಭೂಮಿ’. ಇದು ಅವರ 25ನೇ ಚಿತ್ರವೂ ಹೌದು. ಈ ಚಿತ್ರವು ಒಟಿಟಿಯಲ್ಲಿ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ. ಸದ್ಯದ ಸುದ್ದಿಯ ಪ್ರಕಾರ ಡಿಸ್ನಿ–ಹಾಟ್‌ಸ್ಟಾರ್‌ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ತಮಿಳು ಚಿತ್ರ ಇದು ಎನ್ನಲಾಗುತ್ತಿದೆ.

ಆದರೆ ಚಿತ್ರತಂಡ ಒಟಿಟಿ ಬಿಡುಗಡೆಯ ಕುರಿತು ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ. ‘ಕೋಮಾಲಿ’ ಚಿತ್ರದಲ್ಲಿ ಜಯಂ ರವಿ ಕೊನೆಯ ಬಾರಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅವರದ್ದು ಹಲವು ವರ್ಷಗಳ ಕಾಲ ಕೋಮಾದಲ್ಲಿದ್ದು ಪುನಃ ಎದ್ದೆಳುವ ವ್ಯಕ್ತಿಯ ಪಾತ್ರ.

ಈಗ ಭೂಮಿ ಚಿತ್ರದಲ್ಲಿ ರೈತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಜಯಂ ರವಿ.

ಚಿತ್ರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ದೇಶಕ ಲಕ್ಷಣ್ ‘ಜಯಂ ರವಿ ನಟಿಸಿದ ಹಿಂದಿನ 24 ಚಿತ್ರಕ್ಕಿಂತಲೂ ಈ ಪಾತ್ರ ಭಿನ್ನವಾಗಿದೆ. ಈ ಸಿನಿಮಾದಿಂದ ಸಮಾಜಕ್ಕೆ ಉತ್ತಮ ಸಂದೇಶವಿದೆ. ಈ ಸಿನಿಮಾವು ಕೃಷಿ ಆಧಾರಿತ ವಿಷಯವನ್ನು ಒಳಗೊಂಡಿದೆ. ಚಿತ್ರದಲ್ಲಿ ರವಿ ಕೃಷಿಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದಿದ್ದಾರೆ.

ಲಕ್ಷಣ್ ಹಾಗೂ ಜಯಂ ರವಿ ಕಾಂಬಿನೇಷನ್‌ನಲ್ಲಿ ಈ ಹಿಂದೆ ‘ರೋಮಿಯೊ ಜ್ಯೂಲಿಯೆಟ್’‌ ಹಾಗೂ ‘ಬೊಗನ್’‌ ಸಿನಿಮಾ ಬಂದಿತ್ತು. ಇದು ಈ ಜೋಡಿಯ 3ನೇ ಚಿತ್ರ. ಚಿತ್ರದಲ್ಲಿ ನಿಧಿ ಅಗರ್‌ವಾಲ್ ಹಾಗೂ ರೋನಿತ್ ರಾಯ್ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ. ಈ ಸಿನಿಮಾದ ಮೂಲಕ ಈ ಇಬ್ಬರೂ ಮೊದಲ ಬಾರಿ ತಮಿಳು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರೋನಿತ್ ರಾಯ್ ಜಯಂ ರವಿಗೆ ಎದುರಾಳಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಕ್ಷಿಣದಲ್ಲಿ ರೋನಿತ್ ಅಭಿನಯದ ಎರಡನೇ ಚಿತ್ರವಿದು. ಈ ಹಿಂದೆ ರೋನಿತ್ ಜ್ಯೂನಿಯರ್ ಎನ್‌ಟಿಆರ್ ಅಭಿನಯದ ‘ಜೈ ಲವ ಕುಶ’ ಸಿನಿಮಾದಲ್ಲಿ ಅಭಿನಯಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು