ನವದೆಹಲಿ: ಕೆಜಿಎಫ್ ಚಿತ್ರದ ಯಶಸ್ಸಿನ ಬಳಿಕ ತೆಲುಗು ಚಿತ್ರರಂಗದಲ್ಲಿ ಸಾಲು ಸಾಲು ಚಿತ್ರಗಳ ನಿರ್ದೇಶನದಲ್ಲಿ ನಿರತರಾಗಿರುವ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್, ಟಾಲಿವುಡ್‌ನ ಖ್ಯಾತ ನಟ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್‌ನ ತಾತ್ಕಾಲಿಕವಾಗಿ ‘NTRNEEL’ ಎಂದು ಹೆಸರಿಟ್ಟಿರುವ ಚಿತ್ರವು 2026ರ ಜನವರಿಗೆ ತೆರೆಕಾಣಲಿದೆ.
ಸದ್ಯ, ಚಿತ್ರದ ಚಿತ್ರೀಕರಣದ ಆರಂಭವಾಗಿದೆ. ಈ ಮೂಲಕ ‘ಆರ್‌ಆರ್‌ಆರ್’ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನೀಡಿರುವ ಜೂನಿಯರ್ ಎನ್‌ಟಿಆರ್ ಮತ್ತು ಕೆಜಿಎಫ್, ಸಲಾರ್–ಭಾಗ 1 ನಂತಹ ಯಶಸ್ವಿ ಚಿತ್ರಗಳನ್ನು ನೀಡಿರುವ ನಿರ್ದೇಶಕ ಪ್ರಶಾಂತ್ ನೀಲ್ ಅವರ ಕಾಂಬಿನೇಷನ್‌ನ ಮೊದಲ ಚಿತ್ರ ಇದಾಗಿದೆ.
ಚಿತ್ರ ನಿರ್ಮಾಣ ಸಂಸ್ಥೆಗಳಾದ ಮೈತ್ರಿ ಮೂವಿ ಮೇಕರ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಈ ಕುರಿತ ಪೋಸ್ಟ್ ಒಂದನ್ನು ಎಕ್ಸ್‌ನಲ್ಲಿ ಹಂಚಿಕೊಂಡಿವೆ. ಚಿತ್ರದ ಮುಹೂರ್ತದಲ್ಲಿ ಚಿತ್ರ ನಿರ್ಮಾಕರು ಮತ್ತು ಅವರ ಕುಟುಂಬ ಸದಸ್ಯರು ಭಾಗವಹಿಸಿದ್ದಾರೆ.
'ನಾವೆಲ್ಲರೂ ಕಾಯುತ್ತಿದ್ದ ಸಮಯ ಬಂದೇಬಿಟ್ಟಿತು. #NTRNeel ಚಿತ್ರದ ಚಿತ್ರೀಕರಣವನ್ನು ಮಂಗಳಕರ ಪೂಜೆಯ ಮೂಲಕ ಆರಂಭಿಸಲಾಗಿದೆ’ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ತೆಲುಗು ಚಿತ್ರರಂಗದ ಖ್ಯಾತನಟರಲ್ಲೊಬ್ಬರಾದ 41 ವರ್ಷದ ಜೂ.ಎನ್‌ಟಿಆರ್, ಬಾಲಿವುಡ್ ತಾರೆ ಜಾಹ್ನವಿ ಕಪೂರ್ ಮತ್ತು ಸೈಫ್ ಅಲಿಖಾನ್ ಅಭಿನಯದ ದೇವರಾ ಚಿತ್ರ ಸೆಪ್ಟೆಂಬರ್ 27ರಂದು ತೆರೆಗೆ ಬರಲಿದೆ.
ಆ್ಯಕ್ಷನ್ ಥ್ರಿಲ್ಲರ್ ‘ದೇವರಾ’ ಚಿತ್ರಕ್ಕೆ ಕೊರಟಾಲ ಶಿವ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ತೆಲುಗು, ಕನ್ನಡ, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.