ಗುರುವಾರ , ಅಕ್ಟೋಬರ್ 29, 2020
19 °C

ಪ್ರಶಾಂತ್ ಸಿನಿಮಾದಲ್ಲಿ ನಟಿಸಲು ಗೊಂದಲದಲ್ಲಿರುವ ಜೂನಿಯರ್ ಎನ್‌ಟಿಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜ್ಯೂನಿಯರ್ ಎನ್‌ಟಿಆರ್

ಟಾಲಿವುಡ್ ಯಂಗ್ ಟೈಗರ್ ಜ್ಯೂನಿಯರ್ ಎನ್‌ಟಿಆರ್ ಅನೇಕ ಹಿಟ್ ಸಿನಿಮಾಗಳನ್ನು ನೀಡುತ್ತಲೇ ಬಂದಿದ್ದಾರೆ. ಕಳೆದ ಕೆಲ ವರ್ಷಗಳಿಂದ ಎನ್‌ಟಿಆರ್ ಸೋಲಿಲ್ಲದ ಸರದಾರ ಎನ್ನಿಸಿಕೊಂಡಿದ್ದಾರೆ. ಈಗ ಅನೇಕ ಯಶಸ್ವಿ ನಿರ್ದೇಶಕರು ಎನ್‌ಟಿಆರ್‌ ಸ್ವಷ್ಟನೆಯ ಬಗ್ಗೆ ಕಾಯುತ್ತಿದ್ದಾರೆ. ಆದರೆ ಎನ್‌ಟಿಆರ್ ಮಾತ್ರ ಯಾರ ಸಿನಿಮಾದಲ್ಲಿ ನಟಿಸುವುದು ಎಂಬ ಗೊಂದಲದಲ್ಲಿದ್ದಾರೆ ಎಂಬ ಸುದ್ದಿ ಟಾಲಿವುಡ್‌ನಿಂದ ಕೇಳಿ ಬರುತ್ತಿದೆ.

ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಸಿನಿಮಾದ ಶೂಟಿಂಗ್‌ ವೇಳಾಪಟ್ಟಿಯಲ್ಲಿ ಆದ ಬದಲಾವಣೆಗಳು ಈ ಗೊಂದಲಕ್ಕೆ ಕಾರಣವಾಗಿದೆ ಎನ್ನುತ್ತಿವೆ ಮೂಲಗಳು.

ತಿವಿಕ್ರಮ್‌ ನಿರ್ದೇಶನದ ಸಿನಿಮಾದಲ್ಲೂ ಎನ್‌ಟಿಆರ್ ನಟಿಸುತ್ತಿದ್ದು ಆ ಸಿನಿಮಾದ ಶೂಟಿಂಗ್ ಕೂಡ ಸ್ಥಗಿತಗೊಂಡಿದೆ. ಅಲ್ಲದೇ ಸಿನಿಮಾದ ಶೂಟಿಂಗ್ 2021ರ ಹೊಸ ವರ್ಷದ ನಂತರವಷ್ಟೇ ಆರಂಭವಾಗಿಬೇಕಿದೆ.

ಹಾಗಾಗಿ ಪ್ರಶಾಂತ್ ನೀಲ್ ಸಿನಿಮಾದಲ್ಲಿ ನಟಿಸುವುದು ಹೇಗೆ ಎಂಬ ಬಗ್ಗೆ ಎನ್‌ಟಿಆರ್ ಗೊಂದಲದಲ್ಲಿದ್ದಾರೆ ಎನ್‌ಟಿಆರ್‌.

ಪ್ರಶಾಂತ್ ತೆಲುಗಿನ ಯಶಸ್ವಿ ನಿರ್ಮಾಣ ಸಂಸ್ಥೆಯೊಂದಿಗೆ ಕೆಲಸ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಎನ್‌ಟಿಆರ್ ಪ್ರಶಾಂತ್ ಜೊತೆ ಕೆಲಸ ಮಾಡುವುದಕ್ಕೆ ಅನುಮೋದನೆ ನೀಡಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ 2022ರ ವರೆಗೆ ಡೇಟ್ ನೀಡಲು ಸಾಧ್ಯವಾಗುತ್ತಿಲ್ಲ.

ಈ ನಡುವೆ ಪ್ರಶಾಂತ್ ಕೆಜಿಎಫ್ 2 ಚಿತ್ರದ ಶೂಟಿಂಗ್ ಅನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಇದರ ಶೂಟಿಂಗ್ ಮುಂದಿನ ತಿಂಗಳಿನಿಂದ ಮುಂದುವರಿಯುವ ಸಾಧ್ಯತೆ ಇದೆ. ಆದರೆ ಪ್ರಶಾಂತ್ 2022ರ ವರೆಗೆ ಎನ್‌ಟಿಆರ್‌ಗಾಗಿ ಕಾಯುತ್ತಾರಾ? ಎಂಬುದು ಪ್ರಶ್ನೆಯಾಗಿದೆ.

ಆರ್‌ಆರ್‌ಆರ್ ಸಿನಿಮಾದ ಶೂಟಿಂಗ್ ವಿಳಂಬವಾದ ಕಾರಣ ಎನ್‌ಟಿಆರ್ ಹಾಗೂ ರಾಮ್‌ಚರಣ್ ಇಬ್ಬರ ವೃತ್ತಿಬದುಕಿಗೂ ಅನೇಕ ರೀತಿಯ ತೊಂದರೆಗಳಾಗಲಿವೆ ಎನ್ನುತ್ತಿದೆ ಟಾಲಿವುಡ್ ಮೂಲಗಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು