ಕಲಘಟಗಿ: ನಟ ದಿ. ಅಂಬರೀಶ್ ಹಾಗೂ ನಟಿ ಸುಮಲತಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಮಾರ್ಚ್ 14ರಂದು ಅವರ ಮೊಮ್ಮಗನ ನಾಮಕರಣ ಸಮಾರಂಭ ನಡೆಯಲಿದ್ದು, ಅದಕ್ಕಾಗಿ ವಿಶೇಷ ತೊಟ್ಟಿಲು ಸಿದ್ಧವಾಗಿದೆ.

ಕಲಘಟಗಿ ಪಟ್ಟಣದ ಸಾವಕಾರ ಕುಟುಂಬದವರು ಸಿದ್ಧಪಡಿಸಿದ ಅಲಂಕೃತ ತೊಟ್ಟಿಲು ಅಂಬರೀಶ್ ಅವರ ಮನೆ ಸೇರಿದೆ. ಈ ಮೊದಲು ಡಾ. ರಾಜ್ಕುಮಾರ್, ನಟ ಯಶ್ ಅವರ ಮನೆಗೂ ಇಲ್ಲಿನ ತೊಟ್ಟಿಲು ಹೋಗಿತ್ತು.

ಸಾವಕಾರ ಕುಟುಂಬವು ತೊಟ್ಟಲು ತಯಾರಿಕೆಗೆ ಪ್ರಸಿದ್ಧ ಮನೆತನವಾಗಿದೆ. ಎರಡು ತಿಂಗಳು ತೊಟ್ಟಿಲಿನ ಕೆಲಸ ನಡೆದಿದೆ.

ತೊಟ್ಟಿಲ ವೈಶಿಷ್ಟ್ಯ: ಆರಗು ಮತ್ತು ನೈಸರ್ಗಿಕ ಬಣ್ಣ ಮಿಶ್ರಣ ಮಾಡಿ ತೊಟ್ಟಲಿನ ಮೇಲೆ ಚಿತ್ರಗಳನ್ನು ಬರೆಯಲಾಗಿದೆ. ತೊಟ್ಟಿಲಿನ ಮೇಲೆ ಕೃಷ್ಣಾವತಾರ, ದಶಾವತಾರ, ರಾಮಾಯಣ, ದೇವರ ಸನ್ನಿಧಾನದಲ್ಲಿ ತೊಟ್ಟಿಲೊಳಗೆ ಮಗು ಮಲಗಿದ ಚಿತ್ರವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.