ಬುಧವಾರ, ಸೆಪ್ಟೆಂಬರ್ 29, 2021
20 °C

Tagaru-Shiva Rajkumar| ಬೆಳ್ಳಿತೆರೆಯ ಮೇಲೆ ಮತ್ತೆ ‘ಟಗರು’ ಹವಾ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನರನ್ನು ಚಿತ್ರಮಂದಿರದತ್ತ ಮತ್ತೆ ಸೆಳೆಯಲು ಚಿತ್ರಮಂದಿರದ ಮಾಲೀಕರು ಸಿದ್ಧತೆ ಆರಂಭಿಸಿದ್ದು, ಗಣೇಶ ಚತುರ್ಥಿಗೆ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ನಟ ಶಿವರಾಜ್‌ಕುಮಾರ್‌ ನಟನೆಯ ‘ಟಗರು’ ರಿರಿಲೀಸ್‌ ಆಗಲಿದೆ. ‌

2018ರಲ್ಲಿ ತೆರೆಕಂಡ ಶಿವರಾಜ್‌ಕುಮಾರ್‌ ನಟನೆಯ, ಸೂರಿ ನಿರ್ದೇಶನದ ‘ಟಗರು’ ಸಿನಿಮಾ ಸೂಪರ್‌ಹಿಟ್‌ ಆಗಿತ್ತು. ಸೆ.3ಕ್ಕೆ ಬೆಂಗಳೂರಿನ ತ್ರಿವೇಣಿ ಹಾಗೂ ಹಗರಿಬೊಮ್ಮನಹಳ್ಳಿಯ ಕೃಷ್ಣ ಚಿತ್ರಮಂದಿರದಲ್ಲಿ ‘ಟಗರು’ ಚಿತ್ರ ಮರುಬಿಡುಗಡೆಯಾಗಲಿದೆ. ‘ಚಿತ್ರಮಂದಿರದ ಮಾಲೀಕರೇ ಬೇಡಿಕೆ ಇಟ್ಟಿದ್ದಾರೆ. ಮತ್ತೆ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಈ ಚಿತ್ರವನ್ನೇ ಆಯ್ಕೆ ಮಾಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ರಾಜ್ಯದ ಮತ್ತಷ್ಟು ಚಿತ್ರಮಂದಿರಗಳಲ್ಲಿ ಚಿತ್ರವು ರಿರಿಲೀಸ್‌ ಆಗಲಿದೆ. ಕಳೆದ ಲಾಕ್‌ಡೌನ್‌ ಆದ ಮೇಲೂ ಈ ಚಿತ್ರ ರಿರಿಲೀಸ್‌ ಆಗಿತ್ತು. ಕೆಲ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಪ್ರದರ್ಶನವೂ ಕಂಡಿತ್ತು. ಈ ಚಿತ್ರವನ್ನು ಈಗ ರಿರಿಲೀಸ್‌ ಮಾಡಿದರೆ ಜನರು ಮತ್ತೆ ಚಿತ್ರಮಂದಿರದತ್ತ ಬರುತ್ತಾರೆ ಎನ್ನುವ ನಂಬಿಕೆ ಚಿತ್ರಮಂದಿರದ ಮಾಲೀಕರಿಗಿದೆ. ಹೀಗಾಗಿ ಶೇ 50 ಪ್ರೇಕ್ಷಕರಿಗೆ ಅವಕಾಶವಿದ್ದರೂ ಈ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದಾರೆ’ ಎಂದು ‘ಟಗರು’ ನಿರ್ಮಾಪಕ ಶ್ರೀಕಾಂತ್‌ ಕೆ.ಪಿ ತಿಳಿಸಿದರು. 

ರಾಜ್ಯ ಸರ್ಕಾರವು ಚಿತ್ರಮಂದಿರಗಳಲ್ಲಿ ಶೇ 100 ಪ್ರೇಕ್ಷಕರ ಭರ್ತಿಗೆ ಅವಕಾಶ ನೀಡದೇ ಇರುವ ಕಾರಣ ಗಣೇಶ ಚತುರ್ಥಿಗೆ ಬಿಡುಗಡೆಯಾಗಬೇಕಿದ್ದ ಶಿವರಾಜ್‌ಕುಮಾರ್‌ ನಟನೆಯ ಬಹುನಿರೀಕ್ಷೆಯ ಬಿಗ್‌ಬಜೆಟ್‌ ಚಿತ್ರ ‘ಭಜರಂಗಿ–2’ ಮುಂದೂಡಲಾಗಿದೆ. ‘ಜನ ಹೌಸ್‌ಫುಲ್‌ನಲ್ಲಿ ಈ ಸಿನಿಮಾ ನೋಡಿದರಷ್ಟೇ ಚಿತ್ರದ ಪವರ್‌ ಅನುಭವಿಸಬಹುದು. ಅಭಿಮಾನಿಗಳು ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ಆದಷ್ಟು ಬೇಗ ಟ್ರೇಲರ್‌ ರಿಲೀಸ್‌ ಮಾಡುತ್ತೇವೆ. ಟ್ರೇಲರ್‌ನಲ್ಲೇ ಬಿಡುಗಡೆ ದಿನಾಂಕ ಹೇಳುತ್ತೇವೆ’ ಎಂದು ಶಿವರಾಜ್‌ಕುಮಾರ್‌ ಹೇಳಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು