ಗುರುವಾರ , ಅಕ್ಟೋಬರ್ 6, 2022
24 °C

‘ಅಧ್ಯಕ್ಷ‘ ಖ್ಯಾತಿಯ ನಟಿ ಅರೋಹಿತ ಎಎಪಿ ಸೇರ್ಪಡೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಂದನವನದ ನಟಿ ಹಾಗೂ ‘ಅಧ್ಯಕ್ಷ‘ ಸಿನಿಮಾ ಖ್ಯಾತಿಯ ನಟಿ ಅರೋಹಿತ (ಪ್ರಿಯಾಂಕ) ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿದ್ದಾರೆ.

ಆಮ್‌ ಆದ್ಮಿ ಪಕ್ಷ (ಎಎಪಿ)ದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ಅರೋಹಿತ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ನಂತರ ಮಾತನಾಡಿದ ಅವರು ಅರೋಹಿತ ಅಂತಹ ಯುವ ಪ್ರತಿಭೆಗಳು ಸಮಾಜದಲ್ಲಿ ಬದಲಾವಣೆ ತರಬೇಕು. ಇಂತಹ ಹಂಬಲದೊಂದಿಗೆ ಅವರು ಎಎಪಿ ಸೇರುತ್ತಿದ್ದಾರೆ ಎಂದರು.

ಕರಾಟೆ ಪಟುವಾಗಿರುವ ಅರೋಹಿತ ಬಿ.ಕಾಂ ಪದವಿ ಪಡೆದಿದ್ದಾರೆ. ರಾಜಕೀಯವಾಗಿ ತುಂಬಾ ತಿಳಿದುಕೊಂಡಿರುವ ಅವರು ಪಕ್ಷದ ದೆಹಲಿ ಕಾರ್ಯಕ್ರಮಗಳ ಬಗ್ಗೆ ತುಂಬಾ ಅರಿತಿದ್ದಾರೆ ಎಂದು ಎಎಪಿ ಪಕ್ಷ ಟ್ವೀಟ್‌ ಮಾಡಿದೆ. 

ಅರೋಹಿತ ಅವರು ಆಟಗಾರ, ಕಿರಿಕ್‌ ಪಾರ್ಟಿ, ಜಗ್ಗಿ, ಭಾಗ್ಯ ರಾಜ್‌, ರಾಜರಾಜೇಂದ್ರ, ಆಯುಷ್ಮಾನ್‌ ಭವ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇವನ್ನೂ ಓದಿ


ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು