ಸೋಮವಾರ, ಜೂನ್ 27, 2022
26 °C

ನಟಿ ಮೇಘನಾ ರಾಜ್‌ ಜನ್ಮದಿನ: ಜ್ಯೂ.ಚಿರು ವಿಡಿಯೊ ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಟಿ ಮೇಘನಾ ರಾಜ್‌ ತಮ್ಮ ಜನ್ಮದಿನದಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜ್ಯೂ.ಚಿರುವಿನ ವಿಡಿಯೊವೊಂದನ್ನು ಅಪ್‌ಲೋಡ್‌ ಮಾಡಿದ್ದು, ಪತಿ, ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಫೋಟೊವನ್ನು ಮಗ ಮುಟ್ಟಿ ನೋಡಿ ಆಡುತ್ತಿರುವುದು ಇದರಲ್ಲಿದೆ. 

‘ಅಪ್ಪನ ನೋಡಲ್ಲಿ..ನೋಡಲ್ಲಿ..’ ಎಂದು ಮೇಘನಾ ಹೇಳುವಾಗ ಜ್ಯೂ.ಚಿರು, ಚಿರಂಜೀವಿ ಸರ್ಜಾ ಅವರ ಫೋಟೊ ಮುಟ್ಟಿ ಮುಗುಳ್ನಗುವ ದೃಶ್ಯ ವಿಡಿಯೊದಲ್ಲಿದೆ. ನಟ ಪ್ರಜ್ವಲ್‌ ದೇವರಾಜ್‌, ಗಾಯಕ ವಾಸುಕಿ ವೈಭವ್‌ ಸೇರಿದಂತೆ ಸಾವಿರಾರು ಅಭಿಮಾನಿಗಳು ಇದಕ್ಕೆ ಪ್ರೀತಿಯಿಂದ ಕಮೆಂಟ್‌ ಮಾಡಿದ್ದಾರೆ. 

ಭಾನುವಾರ(ಮೇ 2)ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌ ಅವರ ಮೂರನೇ ವಿವಾಹ ವಾರ್ಷಿಕೋತ್ಸವ. ಈ ಸಂದರ್ಭದಲ್ಲಿ ಚಿರು ಜೊತೆಗಿರುವ ಫೋಟೊ ಅಪ್‌ಲೋಡ್‌ ಮಾಡಿದ್ದ ಮೇಘನಾ, ‘ಐ ಲವ್‌ ಯು, ಕಮ್‌ ಬ್ಯಾಕ್‌’ ಎಂದು ಬರೆದಿದ್ದರು. ಕಳೆದ ವರ್ಷ ಜೂನ್‌ 7ರಂದು ಚಿರಂಜೀವಿ ಮೃತಪಟ್ಟಿದ್ದರು. ಆ ವೇಳೆಯಲ್ಲಿ ಮೇಘನಾ ಗರ್ಭಿಣಿಯಾಗಿದ್ದರು. ಮೊದಲ ಬಾರಿಗೆ ಮಗನ ಜೊತೆ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಮೇಘನಾ ರಾಜ್‌, ಈ ಹೃದಯಸ್ಪರ್ಶಿ ವಿಡಿಯೊ ಅಪ್‌ಲೋಡ್‌ ಮಾಡಿ ಚಿರುವನ್ನು ನೆನಪಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು