ನಟ ಅಜೇಯ ರಾವ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ‘ಲವ್ ಯೂ ರಚ್ಚು’,ಸ್ಯಾಂಡಲ್‌ವುಡ್‌ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ‘ಅರ್ಜುನ್ ಗೌಡ’ ವರ್ಷದ ಕೊನೆಯ ಶುಕ್ರವಾರವಾದ ಇಂದು ಬೆಳ್ಳಿತೆರೆ ಪ್ರವೇಶಿಸುತ್ತಿವೆ.

‘ಲವ್ ಯೂ ರಚ್ಚು’ವಿನಲ್ಲಿ ಪ್ರೀತಿ, ಪ್ರಣಯ ಇದೆಯಾದರೂ ಮುಂದೆ ಅಪರಾಧ ಮತ್ತು ಪತ್ತೇದಾರಿಕೆಯ ಕಥೆಯಾಗಿ ತಿರುವು ಪಡೆದುಕೊಳ್ಳುತ್ತದೆ ಎಂದಿದೆ ಚಿತ್ರತಂಡ. ಚಿತ್ರದ ಹೆಸರು ಮತ್ತು ಕಥೆ, ನಾಯಕಿ ಕೇಂದ್ರಿತವೇ ಆಗಿದೆ. ಶೀರ್ಷಿಕೆಯೇ ‘...ರಚ್ಚು’ ಎಂದು ಇರುವುದರಿಂದ ಸಹಜವಾಗಿ ಕುತೂಹಲ ರಚಿತಾ ರಾಮ್ ಪಾತ್ರದ ಮೇಲೆಯೇ ಇದೆ. ಚಿತ್ರ ಬಿಡುಗಡೆಗೆ ಮುನ್ನವೇ ನಿರ್ಮಾಪಕ ಗುರು ದೇಶಪಾಂಡೆ ಮತ್ತು ನಾಯಕ ಅಜೇಯ ರಾವ್ ನಡುವಿನ ಭಿನ್ನಾಭಿಪ್ರಾಯ ಸಾಕಷ್ಟು ಸುದ್ದಿಯಾಗಿತ್ತು.

ಕೋಟಿ ರಾಮು ಎಂದೇ ಖ್ಯಾತರಾದ ನಿರ್ಮಾಪಕ ದಿವಂಗತ ರಾಮು ಅವರ ನಿರ್ಮಾಣದ ಕೊನೆಯ ಚಿತ್ರ ‘ಅರ್ಜುನ್ ಗೌಡ’ ಮೇಲೂ ಸಾಕಷ್ಟು ನಿರೀಕ್ಷೆ ಇದೆ. ಎರಡು ವರ್ಷಗಳ ಹಿಂದೆಯೇ ಚಿತ್ರೀಕರಣ ಮುಗಿದಿದ್ದರೂ, ಕೋವಿಡ್‌ನಿಂದ ಈ ಸಿನಿಮಾ ಬಿಡುಗಡೆ ವಿಳಂಬವಾಗಿತ್ತು. ರಾಮು ಅವರ ಬ್ಯಾನರ್‌ನಲ್ಲಿ ಬಂದ ಸಿನಿಮಾಗಳಲ್ಲಿ ಹೆಚ್ಚಿನವು ಮಾಸ್ ಕಮರ್ಷಿಯಲ್ ಚಿತ್ರಗಳು. ಇದೇ ಜಾನರ್‌ನಲ್ಲಿ ಶಂಕರ್ ನಿರ್ದೇಶನದಲ್ಲಿ ಈ ಚಿತ್ರವು ಮೂಡಿಬಂದಿದ್ದು, ಭರ್ಜರಿಯಾದ ಆ್ಯಕ್ಷನ್ ಸೀಕ್ವೆನ್ಸ್‌ಗಳು ಸಿನಿಮಾದಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.