ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದುಬೈಗೆ ಹಾರಿದ ವಿದ್ಯಾರ್ಥಿ ವಿದ್ಯಾರ್ಥಿನಿಯರು!

Published 10 ಜುಲೈ 2024, 13:21 IST
Last Updated 10 ಜುಲೈ 2024, 13:21 IST
ಅಕ್ಷರ ಗಾತ್ರ

ಅರುಣ್ ಅಮುಕ್ತ ನಿರ್ದೇಶನದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಜುಲೈ 19ರಂದು ರಾಜ್ಯದಲ್ಲಿ ಬಿಡುಗಡೆಯಾಗುತ್ತಿದೆ. ಇದರ ಮೊದಲು ಚಿತ್ರದ ಪ್ರೀಮಿಯರ್‌ ಪ್ರದರ್ಶನ ಜುಲೈ 14ರಂದು ದುಬೈನಲ್ಲಿ ನಡೆಯಲಿದೆ.     

ಜುಲೈ 14ರಂದೇ ಕೇರಳದಲ್ಲೂ ಸಿನಿಮಾ ಬಿಡುಗಡೆಯಾಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಒಎಂಜಿ ಕಂಪನಿ ದುಬೈನಲ್ಲಿ ಈ ಚಿತ್ರದ ವಿತರಣಾ ಹಕ್ಕು ಪಡೆದುಕೊಂಡಿದೆ. ರ್‍ಯಾಪರ್‌ ಚಂದನ್ ಶೆಟ್ಟಿ ನಾಯಕನಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಭ್ರಷ್ಟ ರಾಜಕಾರಣಿಯೊಬ್ಬನ ಪುತ್ರನ ಸುತ್ತ ಚಿತ್ರದ ಕಥಾಹಂದರವಿದೆ. ಇದೊಂದು ಯೂತ್‌ ಸಬ್ಜೆಕ್ಟ್ ಒಳಗೊಂಡ ಸಿನಿಮಾ. ಶೈಕ್ಷಣಿಕ ಪರಿಸರದ ಕ್ರೌರ್ಯದ ಮುಖವೊಂದನ್ನು ಬಯಲಾಗಿಸುವ ಪ್ರಯತ್ನವೂ ಸಿನಿಮಾದಲ್ಲಿದೆ ಎಂದಿದೆ ಚಿತ್ರತಂಡ. ವೆರೈಟಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಮರ್, ಭಾವನಾ, ಮನಸ್ವಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ಕಾಕ್ರೋಚ್ ಸುಧಿ ಮುಂತಾದವರು ತಾರಾಬಳಗದಲ್ಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT