ಬುಧವಾರ, ನವೆಂಬರ್ 25, 2020
24 °C

ಹೊಸ ಚಿತ್ರದತ್ತ ಟಾಲಿವುಡ್‌ ನಟ ಕಾರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟಾಲಿವುಡ್‌ ನಟ ಕಾರ್ತಿ ಹೊಸ ಚಿತ್ರವೊಂದಕ್ಕೆ ಸಿದ್ಧಗೊಳ್ಳುತ್ತಿದ್ದಾರೆ. ಪಿ.ಎಸ್‌. ಮಿತ್ರನ್‌ ಅವರು ನಿರ್ದೇಶಿಸುತ್ತಿರುವ ಹೊಸ ಚಿತ್ರವಿದು. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ದೀಪಾವಳಿ ಸಂದರ್ಭದಲ್ಲಿ ಚಿತ್ರ ತಂಡ ಹೊಸ ಯೋಜನೆಯನ್ನು ಘೋಷಿಸಿದೆ. 

ಚಿತ್ರಕ್ಕೆ ಜಿ.ವಿ. ಪ್ರಕಾಶ್‌ ಸಂಗೀತ ನೀಡಿದ್ದಾರೆ. ಜಾರ್ಜ್‌ ಸಿ. ವಿಲಿಯಮ್ಸ್‌ ಛಾಯಾಗ್ರಹಣ ಮತ್ತು ರುಬೆನ್‌ ಅವರು ಸಂಕಲನ ಮಾಡಲಿದ್ದಾರೆ. ಪ್ರಿನ್ಸ್‌ ಪಿಕ್ಚರ್ಸ್‌ ಬ್ಯಾನರ್‌ ಅಡಿ ಚಿತ್ರ ನಿರ್ಮಾಣ ಆಗುತ್ತಿದೆ. ಚಿತ್ರೀಕರಣ ಶೀಘ್ರ ಆರಂಭವಾಗಲಿದೆ ಎಂದು ತಂಡದ ಮೂಲಗಳು ಹೇಳಿವೆ.

‘ತಂಬಿ’ ಚಿತ್ರದ ಬಳಿಕ ‘ಸುಲ್ತಾನ್‌’ ಚಿತ್ರದಲ್ಲಿ ಕಾರ್ತಿ ಅವರು ನಟಿಸುತ್ತಿದ್ದಾರೆ. ಇನ್ನು ಮಣಿರತ್ನಂ ನಿರ್ದೇಶನದ ‘ಪೊನ್ನಿಯನ್‌ ಸೆಲ್ವನ್‌’ ಚಿತ್ರ ಸಿದ್ಧವಾಗುತ್ತಿದೆ. ಇದು ತಮಿಳು ಕಾದಂಬರಿ ಆಧರಿತ ಚಿತ್ರ. 

ಐತಿಹಾಸಿಕ ಕಥಾ ವಸ್ತುವುಳ್ಳ ಈ ಚಿತ್ರದಲ್ಲಿ ಜಯಂ ರವಿ, ಐಶ್ವರ್ಯ ರೈ ಬಚ್ಚನ್‌, ಚಿಯಾನ್‌ ವಿಕ್ರಮ್‌, ತ್ರಿಶಾ ಕೃಷ್ಣನ್‌ ಮತ್ತಿತರರು ಇದ್ದಾರೆ. ನವೆಂಬರ್‌ ಅಂತ್ಯದಲ್ಲಿ ಚಿತ್ರೀಕರಣ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು