ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯಾಗಿ ಜ. 9ಕ್ಕೆ ಒಂದು ತಿಂಗಳಾಗಿದೆ. ಈ ವಿಶೇಷ ದಿನವನ್ನು ಗುರುತಿಸಲು, ಕತ್ರಿನಾ ತನ್ನ ಪತಿಯೊಂದಿಗೆ ಇರುವ ಸುಂದರ ಸೆಲ್ಫಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಕತ್ರಿನಾ ಕೈಫ್ ತಮ್ಮ ಒಂದು ತಿಂಗಳ ವಿವಾಹ ವಾರ್ಷಿಕೋತ್ಸವದಂದು ವಿಕ್ಕಿ ಕೌಶಲ್ ಅವರೊಂದಿಗೆ ಮುದ್ದಾದ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. ಚಿತ್ರವನ್ನು ಹಂಚಿಕೊಂಡಿರುವ ಅವರು, 'ಹ್ಯಾಪಿ ಒಂದು ತಿಂಗಳು ನನ್ನ ಲವ್' ಎಂದು ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿಕ್ಕಿ, 'ಹ್ಯಾಪಿ ಹ್ಯಾಪಿ ನನ್ನ ಲವ್' ಎಂದಿದ್ದಾರೆ.

ವಿಕ್ಕಿ ಮತ್ತು ಕತ್ರಿನಾ ಅವರ ಬಾಲಿವುಡ್ ಸ್ನೇಹಿತರು ಫೋಟೊಗೆ ಕಾಮೆಂಟ್ ಮಾಡಿದ್ದಾರೆ. ಮೊದಲಿಗೆ ನೇಹಾ ಧೂಪಿಯಾ, 'ಹ್ಯಾಪಿ ಹ್ಯಾಪಿ ಹ್ಯಾಪಿ ನಮ್ಮ ಸುಂದರ ಜೋಡಿ... ನಾವು ನಿಮ್ಮನ್ನು ಪ್ರೀತಿಸುತ್ತೇವೆ' ಎಂದಿದ್ದಾರೆ.

ಅನೈತಾ ಶ್ರಾಫ್ ಕೂಡ ಕಾಮೆಂಟ್ ಮಾಡಿದ್ದು, 'ಪ್ರತಿ ತಿಂಗಳು ಇನ್ನಷ್ಟು ತರಲಿ! ಇದಕ್ಕಿನ್ನು ಕೇವಲ ಒಂದು ತಿಂಗಳು ಎಂದು ನಂಬಲು ಸಾಧ್ಯವಾಗುತ್ತಿಲ್ಲ!' ಎಂದಿದ್ದಾರೆ. ಇದರೊಂದಿಗೆ ಜೋಯಾ ಅಖ್ತರ್, ವಾಣಿ ಕಪೂರ್, ರಣವೀರ್ ಸಿಂಗ್ ಸೇರಿದಂತೆ ಹಲವರು ಶುಭ ಕೋರಿದ್ದಾರೆ.

ವಿಕ್ಕಿ ಮತ್ತು ಕತ್ರಿನಾ ಡಿಸೆಂಬರ್ 9 ರಂದು ರಾಜಸ್ಥಾನದಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.