ಗುರುವಾರ , ಮೇ 26, 2022
23 °C

KGF | ಸಿನಿಮಾ ಬಿಡುಗಡೆಯಾಗಿ ಇಂದಿಗೆ ಮೂರು ವರ್ಷ; ಚಿತ್ರ ತಂಡದ ಸಂಭ್ರಮ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

KGF Kannada Movie

ಬೆಂಗಳೂರು: ಕನ್ನಡ ಚಿತ್ರರಂಗದಲ್ಲೇ ವಿಶೇಷ ಹವಾ ಸೃಷ್ಟಿಸಿ, ಬಾಲಿವುಡ್‌ ಕೂಡ ತಿರುಗಿ ನೋಡುವಂತೆ ಮಾಡಿದ ಚಿತ್ರ ‘ಕೆಜಿಎಫ್–ಚಾಪ್ಟರ್ 1‘ ಬಿಡುಗಡೆಯಾಗಿ ಇಂದಿಗೆ ಮೂರು ವರ್ಷ.

2018ರ ಡಿಸೆಂಬರ್ 21ರಂದು ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 1 ಬಿಡುಗಡೆಯಾಗಿತ್ತು.

ಚಿತ್ರದ ಮುಂದಿನ ಭಾಗ ‘ಕೆಜಿಎಫ್–ಚಾಪ್ಟರ್ 2‘ ಸಿದ್ಧವಾಗಿದ್ದು, 2022ರ ಏಪ್ರಿಲ್ 14ರಂದು ತೆರೆಕಾಣುತ್ತಿದೆ.

ನಟ ಯಶ್ ಮತ್ತು ನಟಿ ಶ್ರೀನಿಧಿ ಶೆಟ್ಟಿ ಅವರು ಕೆಜಿಎಫ್ ಸಿನಿಮಾದಲ್ಲಿ ಅಭಿನಯಿಸಿದ್ದು, ಬಾಲಿವುಡ್ ನಟ ಸಂಜಯ್ ದತ್ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ಚಿತ್ರದ ಮೊದಲ ಚಾಪ್ಟರ್ ಬಿಡುಗಡೆಯಾಗಿ ಇಂದಿಗೆ ಮೂರು ವರ್ಷ ಪೂರ್ಣಗೊಂಡಿರುವ ಸಂದರ್ಭದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲ್ಮ್ಸ್ ಈ ಕುರಿತು ಟ್ವೀಟ್ ಮಾಡಿದ್ದಾರೆ.

ಚಿತ್ರಕ್ಕೆ ನೀವು ತೋರಿಸಿದ ಪ್ರೀತಿ, ಅಭಿಮಾನ ಮರೆಯಲಾಗದು. ನಮಗಿನ್ನೂ ಚಿತ್ರ ಬಿಡುಗಡೆಯ ಕ್ಷಣಗಳು ನೆನಪಾಗುತ್ತಿದ್ದು, ಶಿಳ್ಳೆ, ಚಪ್ಪಾಳೆಯ ಸದ್ದು ಕೇಳಿಸುತ್ತಿದೆ. ಮತ್ತೆ, ಏಪ್ರಿಲ್ 14ರಂದು ಕೆಜಿಎಫ್– ಚಾಪ್ಟರ್ 2 ಮೂಲಕ ಮತ್ತೆ ನಿಮ್ಮ ಮುಂದೆ ಬರಲಿದ್ದೇವೆ ಎಂದು ಚಿತ್ರತಂಡ ಟ್ವೀಟ್ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು