ಕೆಜಿಎಫ್ ಚಾಪ್ಟರ್-2: ನಾಳೆ ಹೊಸ ಸುದ್ದಿ!?

ಕೆಜಿಎಫ್ ಚಿತ್ರತಂಡ ಹೊಸ ಸುದ್ದಿಯನ್ನು ನಾಳೆ (ಡಿ. 21) ಕೊಡಲಿದೆಯಂತೆ. ಅಂದಹಾಗೆ ಕೆಜಿಎಫ್ ಚಾಪ್ಟರ್–2 ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣ ಶನಿವಾರ ಹೈದರಾಬಾದ್ನಲ್ಲಿ ಪೂರ್ಣಗೊಂಡಿದೆ. ಆ ಸಂಭ್ರಮದಲ್ಲಿ ಚಿತ್ರತಂಡ ಗ್ರೂಪ್ ಫೋಟೋವೊಂದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಚಿತ್ರದ ‘ಅಧೀರ’ ಪಾತ್ರಧಾರಿ ಸಂಜಯದತ್, ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ತಂಡದ ತಂತ್ರಜ್ಞರು, ಸಿಬ್ಬಂದಿ ಈ ಗ್ರೂಪ್ ಫೋಟೋದಲ್ಲಿ ಇದ್ದಾರೆ.
ಕೆಜಿಎಫ್ ಚಾಪ್ಟರ್ –2 ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೆ ನಾವು ಡಿ. 21ರಂದು ಅಚ್ಚರಿಯ ಸುದ್ದಿಯೊಂದನ್ನು ಕೊಡುತ್ತೇವೆ. ಅದೇನೆಂದು ನಾಳೆ ಬೆಳಿಗ್ಗೆ 10.08ಕ್ಕೆ ಗೊತ್ತಾಗಲಿದೆ. ಇದುವರೆಗೆ ತಾಳ್ಮೆಯಿಂದಿದ್ದು ನಮ್ಮನ್ನು ಬೆಂಬಲಿಸಿದ್ದಕ್ಕೆ ಧನ್ಯವಾದಗಳು ಎಂದು ಚಿತ್ರ ತಂಡದ ಸದಸ್ಯರು ಸಂದೇಶ ಹಂಚಿಕೊಂಡಿದ್ದಾರೆ.
ಚಿತ್ರದ ಟೀಸರ್ ಜನವರಿ 8ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಂದಹಾಗೆ ಅಂದು ಚಿತ್ರದ ನಾಯಕ ನಟ ಯಶ್ ಅವರ ಜನ್ಮದಿನ. ಚಿತ್ರದಲ್ಲಿ ರಮೀಕಾ ಸೇನ್, ಶ್ರೀನಿಧಿ ಶೆಟ್ಟಿ, ಪ್ರಶಾಂತ್ ರಾಜ್, ಅನಂತ್ನಾಗ್, ವಸಿಷ್ಠ ಎನ್ ಸಿಂಹ, ರವೀನಾ ಟಂಡನ್ ತಾರಾಗಣದಲ್ಲಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.