ಯಶ್ ಆರ್ಭಟಕ್ಕೆ ದಾಖಲೆಗಳು ದೂಳಿಪಟ: ಮೊದಲ ದಿನ ₹134 ಕೋಟಿ ಬಾಚಿದ K.G.F-2

ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಕೆ.ಜಿ.ಎಫ್ ಚಾಪ್ಟರ್–2 ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ದೂಳೆಬ್ಬಿಸಿದೆ.
ಭಾರತದಲ್ಲೇ ಕೆ.ಜಿ.ಎಫ್–2 ಒಟ್ಟು ಗಳಿಕೆ ₹134.5 ಕೋಟಿ ದಾಟಿದೆ ಎಂದು ಹೊಂಬಾಳೆ ಫಿಲ್ಮ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಶುಕ್ರವಾರ ಅಧಿಕೃತವಾಗಿ ತಿಳಿಸಿದೆ.
ಸಿನಿಮಾದಲ್ಲಿ ಬರುವ ಡೈಲಾಗ್, ‘ದಿಸ್ ಈಸ್ ದಿ ಬಿಗ್ಗೆಸ್ಟ್ ನ್ಯಾಷನಲ್ ಇಷ್ಯು ನೌ’ ಉಲ್ಲೇಖಿಸಿ ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ. ಹೀಗೆ, ನಿರೀಕ್ಷೆಯಂತೇ ಮೊದಲ ದಿನವೇ ಕೆ.ಜಿ.ಎಫ್–2 ನೂರು ಕೋಟಿ ಕ್ಲಬ್ ಸೇರಿದೆ.
ಅಮೆರಿಕದಲ್ಲೇ ಮೊದಲ ದಿನದ ಕಲೆಕ್ಷನ್ ₹8 ಕೋಟಿ ದಾಟಿದೆ ಎಂದು ಗುರುವಾರ ರಾತ್ರಿ ಹೊಂಬಾಳೆ ಫಿಲ್ಮ್ಸ್ ತಿಳಿಸಿತ್ತು. ಒಟ್ಟಾರೆ ಮೊದಲ ದಿನದ ಒಟ್ಟು ಗಳಿಕೆ ₹150 ಕೋಟಿ ದಾಟಿದೆ ಎಂದು ಅಂದಾಜಿಸಲಾಗಿದೆ.
This is the biggest national issue now! ⚠️
Thank you, everyone ❤️#KGFChapter2 @Thenameisyash @prashanth_neel @VKiragandur @hombalefilms @duttsanjay @TandonRaveena @SrinidhiShetty7 @excelmovies @AAFilmsIndia @VaaraahiCC @DreamWarriorpic @PrithvirajProd #KGF2BoxOfficeMonster pic.twitter.com/5NWmHKZqBw
— Hombale Films (@hombalefilms) April 15, 2022
ಭಾರತ ಸೇರಿದಂತೆ ಅಮೆರಿಕ, ರಷ್ಯಾ, ಫ್ರಾನ್ಸ್, ನ್ಯೂಜಿಲೆಂಡ್ ಸೇರಿ ವಿಶ್ವದೆಲ್ಲೆಡೆ ಒಟ್ಟಾರೆ 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ 25 ಸಾವಿರಕ್ಕೂ ಅಧಿಕ ಶೋಗಳು ಮೊದಲ ದಿನ ನಡೆದಿತ್ತು.
ಇದನ್ನೂ ಓದಿ: ಕೆ.ಜಿ.ಎಫ್–2 ಸಿನಿಮಾ ವಿಮರ್ಶೆ: ಚಿನ್ನದ ಕಡಲಲ್ಲಿ ರಾಕಿ ‘ದುನಿಯಾ’
ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಚಿತ್ರ ಬಿಡುಗಡೆಯಾಗಿತ್ತು. ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲೇ ಕೆ.ಜಿ.ಎಫ್–2 ಹವಾ ಅಧಿಕವಾಗಿತ್ತು. ಸಿನಿಮಾ ಟಿಕೆಟ್ ಮಾರಾಟ ಆ್ಯಪ್ ಕಂಪನಿ ಬುಕ್ಮೈ ಶೋದಲ್ಲೇ ಮೊದಲ ದಿನ 29 ಲಕ್ಷ ಟಿಕೆಟ್ಗಳು ಬಿಕರಿಯಾಗಿದ್ದವು.
ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ಸಂದರ್ಶನ: ಕೆ.ಜಿ.ಎಫ್... ಕರ್ನಾಟಕದ ಹೆಮ್ಮೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.