ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್‌–3’ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಅಭಿನಯ

Published 20 ಫೆಬ್ರುವರಿ 2024, 12:47 IST
Last Updated 20 ಫೆಬ್ರುವರಿ 2024, 12:47 IST
ಅಕ್ಷರ ಗಾತ್ರ

ಬೆಂಗಳೂರು: ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್‌–3’ ಚಿತ್ರದಲ್ಲಿ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳಲಿದ್ದಾರೆ.

ಈ ಸಂಬಂಧ ಎಕ್ಸೆಲ್‌ ಎಂಟರ್‌ಟೈನ್‌ಮೈಂಟ್‌ ನಿರ್ಮಾಣ ಸಂಸ್ಥೆ ವಿಡಿಯೊವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಡಾನ್‌–3 ಚಿತ್ರದಲ್ಲಿ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಜತೆಗೆ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುಳಿವು ನೀಡಿದೆ.

ಡಾನ್ ಒಂದು ಮತ್ತು ಎರಡನೇ ಭಾಗಗಳಲ್ಲಿ ಬಾಲಿವುಡ್‌ ಬಾದ್‌ಷಾ ಶಾರುಕ್ ಖಾನ್‌ ಅಭಿನಯಿಸಿದ್ದರು. ಆದರೆ ಇದೀಗ ರಣವೀರ್‌ ಸಿಂಗ್‌ ಸಿನಿ ಪ್ರೇಕ್ಷಕರ ಎದುರು ‘ಡಾನ್‌’ ಆಗಿ ಕಾಣಿಸಿಕೊಳ್ಳಲಿದ್ದಾರೆ.

1978ರಲ್ಲಿ ತೆರೆಕಂಡಿದ್ದ ಬಾಲಿವುಡ್‌ ಸೂಪರ್‌ ಸ್ಟಾರ್‌ ಅಮಿತಾಭ್ ಬಚ್ಚನ್‌ ನಟನೆಯ ‘ಡಾನ್’ ಚಿತ್ರದ ಹೆಸರಿನ ಹಕ್ಕನ್ನು ಎಕ್ಸೆಲ್‌ ಎಂಟರ್‌ಟೈನ್‌ಮೈಂಟ್‌ ನಿರ್ಮಾಣ ಸಂಸ್ಥೆ ಪಡೆದುಕೊಂಡಿದೆ.

ಡಾನ್–3 ಚಿತ್ರಕ್ಕೆ ಪುಷ್ಕರ್ ಮತ್ತು ಗಾಯತ್ರಿ ಕಥೆ ಬರೆದಿದ್ದಾರೆ. ಶಂಕರ್ ಮಹಾದೇವನ್, ಎಹ್ಸಾನ್ ನೂರಾನಿ ಮತ್ತು ಲಾಯ್ ಮೆಂಡೋನ್ಸಾ ಅವರ ಸಂಗೀತ ಸಂಯೋಜನೆಯಲ್ಲಿ ಈ ಚಿತ್ರ ಮೂಡಿಬರಲಿದೆ.

ಈ ಚಿತ್ರವು 2025ಕ್ಕೆ ತೆರೆ ಮೇಲೆ ಬರಲಿದೆ ಎಂದು ಚಿತ್ರತಂಡ ಹೇಳಿದೆ.

ತೆಲುಗು ನಟ ರಾಮ್‌ ಚರಣ್‌ ಜತೆ ‘ಗೇಮ್‌ ಚೇಂಜರ್‌‘ ಚಿತ್ರದಲ್ಲಿ ಕಿಯಾರಾ ಕಾಣಿಸಿಕೊಳ್ಳಲಿದ್ದು, ಇದೇ ಸೆಪ್ಟೆಂಬರ್‌ನಲ್ಲಿ ತೆರೆ ಮೇಲೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT