ನವದೆಹಲಿ: ಟಾಕ್ಸಿಕ್ನಲ್ಲಿ ನನ್ನ ಪಾತ್ರ ಅತ್ಯಂತ ಕಠಿಣವಾಗಿದ್ದು, ತಿಂಗಳುಗಳ ಕಠಿಣ ಪರಿಶ್ರಮ ಅಗತ್ಯವಾಗಿತ್ತು ಎಂದು ನಾಯಕಿ ಕಿಯಾರಾ ಅಡ್ವಾಣಿ ಹೇಳಿದ್ದಾರೆ.

ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದಲ್ಲಿ ಕಿಯಾರಾ ‘ನಾದಿಯಾ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ 2026ರ ಮಾರ್ಚ್ 19ರಂದು ತೆರೆ ಕಾಣುತ್ತಿದೆ.

‘ಟಾಕ್ಸಿಕ್ ಚಿತ್ರದಲ್ಲಿ ಪಾತ್ರ ನನ್ನಿಂದ ಹೆಚ್ಚಿನದನ್ನು ಬಯಸಿತ್ತು. ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಪರಿವರ್ತನೆಯ ಅನುಭವ ಪಡೆದೆ. ಇದು ಇದುವರೆಗಿನ ಕಠಿಣ ಪಾತ್ರವಾಗಿದೆ. ತಿಂಗಳುಗಳ ಕಠಿಣ ಪರಿಶ್ರಮದ ಅಗತ್ಯವಿತ್ತು’ ಎಂದಿದ್ದಾರೆ.

ಫಸ್ಟ್ಲುಕ್ ಬಗ್ಗೆ ಪ್ರತಿಕ್ರಿಯಿಸಿ, ‘ಫಸ್ಟ್ಲುಕ್ಗೆ ಅಪಾರ ಪ್ರತಿಕ್ರಿಯೆ, ಪ್ರೀತಿ ವ್ಯಕ್ತವಾಗಿದೆ. ಅದು ಪದಗಳಿಗೆ ನಿಲುಕದ್ದು’ ಎಂದು ಹೇಳಿದ್ದಾರೆ.

ಭಾನುವಾರ ಕಿಯಾರಾ ಅವರ ಫಸ್ಟ್ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.

ಗೀತು ಮೋಹನ್ದಾಸ್ ನಿರ್ದೇಶನದ ಈ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಚಿತ್ರದಲ್ಲಿ ಕಿಯಾರಾ ನಾದಿಯಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸರ್ಕಸ್ ಕಂಪನಿ ವೇದಿಕೆ ಮೇಲೆ ಅವರು ನಿಂತಿರುವಂತೆ ಕಿಯಾರಾ ಕಾಣಿಸಿಕೊಂಡಿದ್ದಾರೆ.

ಸಿನಿಮಾವು ಹಿಂದಿ, ತಮಿಳು, ತೆಲುಗು, ಮಲಯಾಳ ಸೇರಿದಂತೆ ಹಲವು ಭಾರತೀಯ ಹಾಗೂ ವಿದೇಶಿ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಗೊಳ್ಳಲಿದೆ. ಜೆ.ಜೆ.ಪೆರ್ರಿ ‘ಟಾಕ್ಸಿಕ್’ನ ಸಾಹಸ ದೃಶ್ಯಗಳ ಸಂಯೋಜನೆ ಮಾಡಿದ್ದಾರೆ. ‘ಕೆ.ಜಿ.ಎಫ್’ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನ, ರಾಜೀವ್ ರವಿ ಛಾಯಾಚಿತ್ರಗ್ರಹಣ, ಉಜ್ವಲ್ ಕುಲಕರ್ಣಿ ಸಂಕಲನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.