ಸುದೀಪ್ ನಟನೆಯ ಹಾಗೂ ವಿಜಯ್ ಕಾರ್ತಿಕೇಯನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಮಾರ್ಕ್’ ಸಿನಿಮಾ ಇದೇ ಡಿಸೆಂಬರ್ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಮಾರ್ಕ್ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
.25 ದಿನಗಳಲ್ಲಿ ಬ್ಯಾಗ್ರೌಂಡ್ ಸ್ಕೋರ್: 'ಮಾರ್ಕ್' ಸಿನಿಮಾ ಕುರಿತು ಅಜನೀಶ್ ಮಾತು.Sandalwood: ದರ್ಶನ್ ನಟನೆಯ 'ಡೆವಿಲ್' ಹಿಂದಿಕ್ಕಿದ ಸುದೀಪ್ ಅಭಿನಯದ 'ಮಾರ್ಕ್'.
ಸರೆಗಮ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಮಾರ್ಕ್ ಸಿನಿಮಾದ ‘ಕಾಳಿ’ ಹಾಡನ್ನು ಬಿಡುಗಡೆ ಮಾಡಲಾಗಿದೆ. ಅನಿರುದ್ಧ ಶಾಸ್ತ್ರಿ ಸಾಹಿತ್ಯ ಬರೆದು ಹಾಡಿಗೆ ಧ್ವನಿ ನೀಡಿದ್ದಾರೆ. ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರು, ಕಾಳಿ ಹಾಡಿನಲ್ಲಿ ರುದ್ರಾವತಾರ ತಾಳಿದ್ದಾರೆ. ಕೈಯಲ್ಲಿ ತ್ರಿಶೂಲ ಹಿಡಿದು ದುಷ್ಟರ ಸಂಹಾರ ಮಾಡಲು ಹೊಸ ಅವತಾರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ.

ಮಾರ್ಕ್ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಸುದೀಪ್ ಜೊತೆಗೆ ಶೈನ್ ಟಾಮ್ ಚಾಕೊ, ಯೋಗಿ ಬಾಬು ಇನ್ನೂ ಅನೇಕರು ನಟಿಸಿದ್ದಾರೆ.

ಸಿನಿಮಾಕ್ಕೆ ಕಿಚ್ಚ ಕ್ರಿಯೇಷನ್ ಮತ್ತು ಸತ್ಯಜ್ಯೋತಿ ಫಿಲಮ್ಸ್ ನಿರ್ಮಾಣ ಮಾಡಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಮೂಲಕ ಪ್ರಿಯಾ ಸುದೀಪ್ 'ಮಾರ್ಕ್' ಸಿನಿಮಾ ವಿತರಣೆ ಮಾಡಲು ಮುಂದಾಗಿದ್ದಾರೆ. ಇವರೊಂದಿಗೆ ಕೆಆರ್ಜಿ ಸ್ಟುಡಿಯೋ ಕೈ ಜೋಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.