ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ 'ಡೆವಿಲ್' ಹಾಗೂ ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ.

ಈ ಎರಡೂ ಸಿನಿಮಾಗಳ ಟ್ರೇಲರ್ಗಳು ಬಿಡುಗಡೆಯಾಗಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟರ ವಿಭಿನ್ನ ಗೆಟಪ್ಗಳನ್ನು ಕಣ್ತುಂಬಿಕೊಂಡಿದ್ದಾರೆ.

ಈ ಎರಡೂ ಸಿನಿಮಾಗಳು ಆ್ಯಕ್ಷನ್ ಕಥಾಹಂದರವನ್ನು ಹೊಂದಿದ್ದು, ಮೇಕಿಂಗ್ ದೃಷ್ಟಿಯಿಂದ ಅದ್ದೂರಿತನದಿಂದ ಕೂಡಿವೆ. 'ಡಿ ಬಾಸ್' ಮತ್ತು 'ಸ್ಯಾಂಡಲ್ವುಡ್ ಬಾದ್ ಷಾ'ರ ಮಾಸ್ ಅವತಾರಗಳು ಶಿಳ್ಳೆಗಿಟ್ಟಿಸಿಕೊಳ್ಳುವುದು ಪಕ್ಕಾ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

'ಸೂರ್ಯನಿಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ. ನಾನ್ ಬರ್ತಿದ್ದೀನಿ ಚಿನ್ನ' ಎಂದು ಅಬ್ಬರಿಸಿರುವ ದರ್ಶನ್, 'ಡೆವಿಲ್' ರೂಪದಲ್ಲಿ ಡಿಸೆಂಬರ್ 11ರಂದು ದಾಂಗುಡಿ ಇಡಲಿದ್ದಾರೆ.

'ಹದ್ದು ಹಾರ್ಕೊಂಡ್ ಬರೋದಕ್ ಲೇಟ್ ಆಗ್ಬಹದು, ಚಿರತೆ ಓಡ್ಕೊಂಡ್ ಬರೋಕ್ ಲೇಟಾಗ್ಬಹುದು. ಇದು ಮಾರ್ಕ್' ಎಂದು ಬೇಸ್ ವಾಯ್ಸ್ನಲ್ಲಿ ಗುಡುಗಿರುವ ಸುದೀಪ್, ಡಿಸೆಂಬರ್ 25ರಂದು ತೆರೆಗೆ ನುಗ್ಗಲಿದ್ದಾರೆ.

ಯಾವ ಟ್ರೇಲರ್ಗೆ ಎಷ್ಟು ವ್ಹೀವ್ಸ್?
'ಡೆವಿಲ್' ಸಿನಿಮಾದ ಟ್ರೇಲರ್ ಡಿಸೆಂಬರ್ 5ರಂದು ಬಿಡುಗಡೆಯಾಗಿದ್ದು, ಯಟ್ಯೂಬ್ನಲ್ಲಿ ಇದುವರೆಗೆ 1 ಕೋಟಿ 17 ಲಕ್ಷ ವೀಕ್ಷಣೆ ಪಡೆದಿದೆ. ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಮಾರ್ಕ್' ಚಿತ್ರದ ಟ್ರೇಲರ್ ಡಿಸೆಂಬರ್ 7ರಂದು ಬಿಡುಗಡೆಯಾಗಿದ್ದು, ಇದುವರೆಗೆ 1 ಕೋಟಿ 41 ಲಕ್ಷ ಬಾರಿ ನೋಡಿಸಿಕೊಂಡಿದೆ. ಇದನ್ನು, 3.97 ಲಕ್ಷ ಜನರು ಲೈಕ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.