ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಫೀ ವಿತ್ ಕರಣ್‌ನಲ್ಲಿ ವಿಜಯ್ ದೇವರಕೊಂಡ ಸೆಕ್ಸ್ ಗುಟ್ಟು ಹೇಳಿದ ಅನನ್ಯಾ ಪಾಂಡೆ!

ಅಕ್ಷರ ಗಾತ್ರ

ಬೆಂಗಳೂರು: ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿರುವ ‘ಕಾಫೀ ವಿತ್ ಕರಣ್ ಸೀಸನ್ 7’ ಒಟಿಟಿ ವೇದಿಕೆಗಳಲ್ಲಿ ಅತಿ ಹೆಚ್ಚು ಗಮನ ಸೆಳೆದಿದೆ. ನಿರೂಪಕ ಕರಣ್ ಜೋಹರ್ ಅವರು ನಡೆಸಿ ಕೊಡುತ್ತಿರುವ ಈ ಕಾರ್ಯಕ್ರಮಲ್ಲಿ ತಾರಾ ಸೆಲಿಬ್ರಿಟಿಗಳು ಕಾಣಿಸಿಕೊಳ್ಳುತ್ತಿದ್ದಾರೆ.

ಕರಣ್ ಜೋಹರ್ ಅವರ ಸೊಗಸಾದ ನಿರೂಪಣೆ ಜೊತೆಗೆ ಅವರು ಸೆಲಿಬ್ರಿಟಿಗಳಿಗೆ ಕೇಳುವ ಕೆಲ ಪ್ರಶ್ನೆಗಳು ಸೆಲಿಬ್ರಿಟಿಗಳನ್ನು ಕೆಲವೊಮ್ಮೆ ಇಕ್ಕಟ್ಟಿನಲ್ಲಿ ಸಿಲುಕಿಸುತ್ತವೆ.

ಕಾಫಿ ವಿತ್ ಕರಣ್‌ನ ಸೀಸನ್ 7 ಮೊದಲ ಎಪಿಸೋಡ್‌ನಲ್ಲಿ ರಣವೀರ್ ಸಿಂಗ್ –ಆಲಿಯಾ ಭಟ್ ಕಾಣಿಸಿಕೊಂಡಿದ್ದರು. ಎರಡನೇ ಎಪಿಸೋಡ್‌ನಲ್ಲಿ ಸಾರಾ–ಜಾಹ್ನವಿ, ಮೂರನೇ ಎಪಿಸೋಡ್‌ನಲ್ಲಿ ಅಕ್ಷಯ್ ಕುಮಾರ್–ಸಮಂತಾ ಕಾಣಿಸಿಕೊಂಡಿದ್ದರು. ಈ ಮೂರು ಎಪಿಸೋಡ್‌ಗಳು ಸಾಕಷ್ಟು ಹಿಟ್ ಆಗಿವೆ.

ಇದೀಗ ನಾಲ್ಕನೇ ಎಪಿಸೋಡ್‌ನಲ್ಲಿ ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗೂ ನಟಿ ಅನನ್ಯಾ ಪಾಂಡೆ ಭಾಗವಹಿಸಿದ್ದಾರೆ. ಇದರ ಪ್ರೋಮೊ ಸಾಕಷ್ಟು ಸದ್ದು ಮಾಡಿದೆ. ಈ ಎಪಿಸೋಡ್ ಗುರುವಾರ ಸಂಜೆ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ.

ಕರಣ್ ಜೋಹರ್ ಅವರು ವಿಜಯ್ ದೇವರಕೊಂಡ ಅವರಿಗೆ ಕೇಳಿರುವ ಪ್ರಶ್ನೆ ಹಾಗೂ ಅದಕ್ಕೆ ಅನನ್ಯಾ ಪಾಂಡೆ ಕೊಟ್ಟ ಉತ್ತರ ಶೋ ಬಗ್ಗೆ ಕುತೂಹಲ ಹುಟ್ಟುವಂತೆ ಮಾಡಿದೆ. ‘ನೀವು ಕೊನೆ ಬಾರಿಗೆ ಯಾವಾಗ ಸೆಕ್ಸ್‌ ಮಾಡಿದ್ದೀರಿ’? ಎಂದು ಕರಣ್ ವಿಜಯ್‌ಗೆ ಕೇಳಿದರೆ ವಿಜಯ್ ನಾಚಿಕೊಂಡು ನಕ್ಕು ಸುಮ್ಮನಾಗುತ್ತಾರೆ. ಆದರೆ, ಅನನ್ಯಾ ಪಾಂಡೆ, ‘ನನಗೆ ಗೊತ್ತು, ಇವತ್ತು ಮುಂಜಾನೆಯೇ ಅವರು ಸೆಕ್ಸ್‌ ಮಾಡಿರಬಹುದು’ ಎಂದು ಹೇಳಿದ್ದಕ್ಕೆ ಕರಣ್ ದೊಡ್ಡ ಆಶ್ಚರ್ಯವನ್ನುಂಟು ಮಾಡಿದರು.

ಇನ್ನು ಕಳೆದ ಸಂಚಿಕೆಯಲ್ಲಿ ಸಾರಾ–ಜಾಹ್ನವಿ ತಮಗೆ ವಿಜಯ್ ದೇವರಕೊಂಡ ಇಷ್ಟ ಎಂದು ಹೇಳಿದ್ದರು. ಈ ಬಗ್ಗೆ ಕರಣ್ ನಿಮಗೆ ಅವರು ಇಷ್ಟಾನಾ ಎಂದು ಪರೋಕ್ಷವಾಗಿ ಕೇಳಿದ್ದಕ್ಕೆ ಏನು ಉತ್ತರ ಕೊಟ್ಟರು ಎಂಬುದನ್ನು ಶೋದಲ್ಲಿ ನೋಡಿ ತಿಳಿದುಕೊಳ್ಳಬೇಕಾಗಿದೆ.

ವಿಜಯ ದೇವರಕೊಂಡ ಹಾಹೂ ಅನನ್ಯಾ ಪಾಂಡೆ ಪ್ರಮುಖ ಪಾತ್ರದಲ್ಲಿರುವ ಪುರಿ ಜಗನ್ನಾಥ್ ನಿರ್ದೇಶನದ ಬಹುನಿರೀಕ್ಷಿತ ಲೈಗರ್ ಸಿನಿಮಾ ಆಗಸ್ಟ್ 25 ರಂದು ಬಿಡುಗಡೆಯಾಗಲಿದೆ.

ಜಾಹ್ನವಿಗೂ ಮುಜುಗರದ ಪ್ರಶ್ನೆ

ಬಾಲಿವುಡ್ ಬೇಬಿ ಎಂದು ಖ್ಯಾತವಾಗಿರುವ ಹಾಗೂ ತಮ್ಮ ಹಾಟ್ ಲುಕ್‌ನಿಂದಲೇ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ಜಾಹ್ನವಿ ಕಪೂರ್ ಕಾಫೀ ವಿತ್ ಕರಣ್‌ ಸೀಸನ್ 7 ನ ಎರಡನೇ ಸಂಚಿಕೆಯ ಅತಿಥಿಯಾಗಿದ್ದರು.

ಜಾಹ್ನವಿ ಜೊತೆ ಅವರ ಆಪ್ತ ಸ್ನೇಹಿತೆ ಸಾರಾ ಅಲಿಖಾನ್ ಕೂಡ ಭಾಗವಹಿಸಿದ್ದರು. ಈ ಇಬ್ಬರೂ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರಲಾರರು ಎಂಬಂತ ಸ್ನೇಹಿತೆಯರು ಎಂಬ ಗುಲ್ಲು ಬಾಲಿವುಡ್‌ನಲ್ಲಿ ಇರುವುದರಿಂದ ಕರಣ್ ಇವರಿಬ್ಬರನ್ನೂ ಒಟ್ಟಿಗೆ ಕಾಫಿಗೆ ಕರೆದಿದ್ದು ವಿಶೇಷವಾಗಿತ್ತು.

ಈ ವೇಳೆ ನಿರೂಪಕ ಕರಣ್ ಜೋಹರ್ ಅವರು ಜಾಹ್ನವಿ ನಿರೀಕ್ಷೆನೇ ಮಾಡಿರದಿದ್ದ ಪ್ರಶ್ನೆಯೊಂದನ್ನು ಎಸೆದರು. ಇದಕ್ಕೆ ಅವಕ್ಕಾದ ಜಾಹ್ನವಿ ಒಂದು ಕ್ಷಣ ಉತ್ತರ ಕೊಡದೇ ಹಾಗೇ ಮೌನವಾಗಿದ್ದರು.

‘ಜಾಹ್ನವಿ ನೀವು ನಿಮ್ಮ ಎಕ್ಸ್ ಬಾಯ್‌ಫ್ರೆಂಡ್ ಜೊತೆ ಎಂದಾದರೂ ಸೆಕ್ಸ್ ಮಾಡಿದ್ರಾ?’ಎಂದು ಕರಣ್ ಜಾಹ್ನವಿಗೆ ನೇರ ಪ್ರಶ್ನೆ ಎಸೆದರು. ಇದರಿಂದ ಸಾವರಿಸಿಕೊಂಡ ಜಾಹ್ನವಿ, ‘ಇಲ್ಲ, ನಾನು ಹಿಂದೆ ಹೋಗಲು ಬಯಸುವುದಿಲ್ಲ’ ಎಂದು ಕರಣ್ ಅವರ ಕುತೂಹಲಕ್ಕೆ ತಣ್ಣೀರೆರಚಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT