'ಎನ್ಟಿಆರ್30' ಸಿನಿಮಾದಲ್ಲಿ ಮಾಸ್ ಅಂಶಗಳು ಇರಲಿವೆ ಎಂದ ನಿರ್ದೇಶಕ ಕೊರಟಾಲ ಶಿವ

ಹೈದರಾಬಾದ್: ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ಚರಣ್ ಅಭಿನಯದ ಬಹುನಿರೀಕ್ಷಿತ 'ಆಚಾರ್ಯ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಕೊರಟಾಲ ಶಿವ, ನಟ ಜೂನಿಯರ್ ಎನ್ಟಿಆರ್ ಅವರೊಂದಿಗಿನ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ಸಿನಿಮಾಗೆ 'ಎನ್ಟಿಆರ್30' ಎಂಬ ಶೀರ್ಷಿಕೆಯನ್ನಿಟ್ಟಿದ್ದು, ಸಿನಿಮಾ ತೀವ್ರ ಕುತೂಹಲ ಕೆರಳಿಸಿದೆ. ಈ ಎಲ್ಲಾ ನಿರೀಕ್ಷೆಗಳ ನಡುವೆ ಎನ್ಟಿಆರ್ ಶೀಘ್ರದಲ್ಲೇ ಸೆಟ್ಗೆ ಸೇರಲಿದ್ದಾರೆ.
ಪ್ರಭಾಸ್ ಅಭಿನಯದ ಸೂಪರ್ ಹಿಟ್ ಚಿತ್ರ 'ಮಿರ್ಚಿ'ಗಿಂತ 'ಎನ್ಟಿಆರ್30' ಹೆಚ್ಚು ಮಾಸ್ ಅಂಶಗಳನ್ನು ಒಳಗೊಂಡಿರುತ್ತದೆ ಎಂದು ಕೊರಟಾಲ ಶಿವ ಅವರು ತಮ್ಮ ಇತ್ತೀಚಿನ ಮಾಧ್ಯಮ ಸಂವಾದದಲ್ಲಿ ಹೇಳಿದ್ದಾರೆ.
''ಎನ್ಟಿಆರ್30' ಸಿನಿಮಾಗಾಗಿ ಬಹುತಾರಾಗಣದ ದೊಡ್ಡ ಸ್ಕ್ರಿಪ್ಟ್ ಅನ್ನು ಸಿದ್ದಪಡಿಸಿದ್ದೇನೆ. ಇದು ನನ್ನ ಮೊದಲ ಚಿತ್ರ ಮಿರ್ಚಿಗಿಂತಲೂ ಹೆಚ್ಚು ಮಾಸ್ ಮತ್ತು ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿರುತ್ತದೆ' ಎಂದು ಕೊರಟಾಲ ಹೇಳಿದ್ದಾರೆ.
ಎನ್ಟಿಆರ್ ಅವರ ಮುಂದಿನ ಚಿತ್ರದಲ್ಲಿ ಹೆಚ್ಚು ಕಮರ್ಷಿಯಲ್ ಅಂಶಗಳನ್ನು ಸೇರಿಸುವ ಬಗ್ಗೆ ಸುಳಿವು ನೀಡಿದ ಕೊರಟಾಲ, 'ಮಾಸ್ ಓವರ್ ಡೋಸ್ ಇರುತ್ತದೆ'. ಅಲ್ಲದೆ, ಈ ಬಹು ನಿರೀಕ್ಷಿತ ಚಿತ್ರವು ದೊಡ್ಡ ಮಟ್ಟದಲ್ಲಿ ಚಿತ್ರೀಕರಣಗೊಳ್ಳಲಿದೆ ಮತ್ತು ಇಡೀ ಕಥೆಯನ್ನು ಉತ್ತೇಜಿಸುವ ಬಲವಾದ ಭಾವನಾತ್ಮಕ ತಿರುಳನ್ನು ಹೊಂದಿರಲಿದೆ ಎಂದು ಹೇಳಿದರು.
ವರದಿಗಳ ಪ್ರಕಾರ, 'NTR30' ಸಿನಿಮಾ ಮೇ 2023 ರಲ್ಲಿ ಬಿಡುಗಡೆಯಾಗಲಿದೆ. ಕೊರಟಾಲ ಶಿವ ಮತ್ತು ಎನ್ಟಿಆರ್ ಈ ಹಿಂದೆ ಸೂಪರ್ಹಿಟ್ ಚಿತ್ರ 'ಜನತಾ ಗ್ಯಾರೇಜ್ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.