ಶನಿವಾರ, ಜನವರಿ 28, 2023
13 °C

‘ಕೆಟಿಎಂ’ ಟೀಸರ್ ಬಂತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ದಿಯಾ’ ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಟನೆಯ ‘ಕೆಟಿಎಂ’ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಚಂದನವನದ 50 ಜನ ಗಣ್ಯರು ‘ಕೆಟಿಎಂ’ ಟೀಸರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆ ಮಾಡಿದರು. 

‘ಅಥರ್ವ’ ಸಿನಿಮಾ ಖ್ಯಾತಿಯ ಅರುಣ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಎರಡನೇ ಸಿನಿಮಾ ‘ಕೆಟಿಎಂ’. ಚಿತ್ರೀಕರಣ ಕೆಲಸ ಮುಗಿಸಿರುವ ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯವನ್ನು ಆರಂಭಿಸಿದೆ. ವಿಕ್ರಮ್ ರವಿಚಂದ್ರನ್, ಶ್ರುತಿ ಹರಿಹರನ್, ವಿಜಯ ರಾಘವೇಂದ್ರ, ದೀಪಿಕಾ ದಾಸ್, ಅನುಪಮಾ ಗೌಡ, ನವೀನ್ ಶಂಕರ್, ಮೇಘಾ ಶೆಟ್ಟಿ, ಸಿದ್ದು ಮೂಲಿಮನಿ, ಖುಷಿ ರವಿ, ಇಶಾನ್, ಶೈನ್ ಶೆಟ್ಟಿ ಸೇರಿದಂತೆ 50 ಸಿನಿಮಾ ನಟ ನಟಿಯರು ಟೀಸರ್ ಬಿಡುಗಡೆ ಮಾಡಿದರು.

ನವಿರಾದ ಪ್ರೇಮ ಕಥೆಯ ‘ಕೆಟಿಎಂ’ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ನಾಯಕ. ನಾಲ್ಕು ಶೇಡ್‌ನಲ್ಲಿ ತೆರೆ ಮೇಲೆ ಕಾಣಸಿಗಲಿದ್ದಾರೆ. ಕಾಜಲ್ ಕುಂದರ್ ಹಾಗೂ ಸಂಜನಾ ಡೋಸ್ ಚಿತ್ರದ ನಾಯಕಿಯರು. ಉಷಾ ಭಂಡಾರಿ, ಪ್ರಕಾಶ್ ತೂಮಿನಾಡು, ರಘು ರಮಣಕೊಪ್ಪ, ಶಾನಿಲ್ ಗುರು, ಬಾಬು ಹಿರಣ್ಣಯ್ಯ, ದೇವ್ ದೇವಯ್ಯ, ಅಭಿಷೇಕ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಮಹಾಸಿಂಹ ಮೂವೀಸ್ ಬ್ಯಾನರ್ ಅಡಿ ವಿನಯ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನವೀನ್ ಕ್ಯಾಮೆರಾ ವರ್ಕ್, ಚೇತನ್ ಸಂಗೀತ ನಿರ್ದೇಶನ ಕೆಟಿಎಂ ಚಿತ್ರಕ್ಕಿದೆ. ಉಡುಪಿ, ಮಂಗಳೂರು, ಕಾರ್ಕಳ, ಬೆಂಗಳೂರಿನಲ್ಲಿ ಸಿನಿಮಾವನ್ನು ಸೆರೆ ಹಿಡಿಯಲಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿದೆ. ಮಾರ್ಚ್‌ನಲ್ಲಿ ಬಿಡುಗಡೆಯಾಗಲಿದೆ ಎಂದಿದೆ ಚಿತ್ರತಂಡ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು