ಶುಕ್ರವಾರ, ಆಗಸ್ಟ್ 12, 2022
23 °C

ಚಿರು ಕುಟುಂಬಕ್ಕೆ ಪುತ್ರೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಪತ್ನಿ ಹಾಗೂ ನಟಿ ಮೇಘನಾರಾಜ್‌ ಗಂಡು ಮಗುವಿಗೆ ಜನ್ಮನೀಡಿದ್ದಾರೆ.

ಬೆಂಗಳೂರಿನ ಕೆ.ಆರ್‌. ರಸ್ತೆಯ ಅಕ್ಷಯ ಆಸ್ಪತ್ರೆಯಲ್ಲಿ ಬೆಳಿಗ್ಗೆ 11:07ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ನಿಶ್ಚಿತಾರ್ಥ ಮಾಡಿಕೊಂಡ ದಿನವೇ ಈ ದಂಪತಿಗೆ ಪುತ್ರೋತ್ಸವವಾಗಿದೆ. ಇದೇ ದಿನ ಸರ್ಜಾ ಮತ್ತು ಅವರ ಮಾವ ಸುಂದರ್‌ರಾಜ್‌ ಕುಟುಂಬಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಸರ್ಜಾ ಕುಟುಂಬಕ್ಕೆ ಜೂನಿಯರ್ ಸರ್ಜಾ ಆಗಮನವಾದಂತಾಗಿದೆ.


ಧ್ರುವ ಸರ್ಜಾ ಇನ್‌ಸ್ಟಾ ಗ್ರಾಂ ಸ್ಟೇಟಸ್

ಧ್ರುವ ಸರ್ಜಾ ಕೂಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ‘ಗಂಡು ಮಗು, ಜೈ ಹನುಮಾನ್‌’ ಎಂದು ಸ್ಟೇಟಸ್ ಅಪ್‌ಡೇಟ್‌ ಮಾಡಿದ್ದಾರೆ.

ವೈದ್ಯರು ಡೇಟ್ ಕೊಟ್ಟ ಹಿನ್ನೆಲೆಯಲ್ಲಿ ಮೇಘನಾ ರಾಜ್ ಅವರನ್ನು ಬುಧವಾರ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಮಂಗಳವಾರವಷ್ಟೇ ಚಿರು ಸಹೋದರ ಧ್ರುವ ಸರ್ಜಾ ಸುಮಾರು ₹10 ಲಕ್ಷ ಬೆಲೆಯ ಬೆಳ್ಳಿ ತೊಟ್ಟಿಲನ್ನು ಖರೀದಿಸಿ, ಅಣ್ಣನ ವಾರಸುದಾರನನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದರು.

ಧ್ರುವ ಸರ್ಜಾ ಅವರು ಆಸ್ಪತ್ರೆಯ ವಾರ್ಡ್‌ ಬಾಗಿಲಲ್ಲಿ ಮಗು ಎತ್ತಿಕೊಂಡಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೇಘನಾ ರಾಜ್‌ಗೆ ಮಗು ಜನಿಸುತ್ತಿದ್ದಂತೆ ಚಿರು ಸರ್ಜಾ ಅಜ್ಜಿ ಲಕ್ಷ್ಮೀದೇವಿ ಆಸ್ಪತ್ರೆಯಿಂದ ಹೊರಬಂದು, ಸ್ವೀಟ್ಸ್‌ ಖರೀದಿಸಿ ಆಸ್ಪತ್ರೆಯ ಸಿಬ್ಬಂದಿಗೂ ಹಂಚಿ ಸಂಭ್ರಮಿಸಿದ್ದಾರೆ. ಇತ್ತೀಚೆಗಷ್ಟೇ ಮೇಘನಾಗೆ ಸೀಮಂತ ಕಾರ್ಯಕ್ರಮ ನಡೆಸಿದ್ದರು.

 
 
 
 

 
 
 
 
 
 
 
 
 

😍😘@chirusarja ಜೂನಿಯರ್ ಚಿರು ಸರ್ಜಾ ಜೊತೆ, ಧೃವಾ ಸರ್ಜಾ.... ❤❤❤❤❤ ಗಂಡು ಮಗುವಿಗೆ ಜನ್ಮ ಕೊಟ್ಟ ಮೇಘನಾ ರಾಜ್! 😍😘 @megsraj @chirusarja @dhruva_sarjaa #meghanaraj #chirusarja #dhruvasarja #beauty #Cute 😍😘 @thenameisyash @iamradhikapandit #daughter #yashfilms #kannadafilms #kannadamovies #sandalwood #bollywood #kgf #filmyduniya_66 #Filmy_Duniya #beauty #beautiful #beautydaughter #beautifuldaughter #king #queen #cutebaby #baby #babygirl #queenbaby 😍😘 #cute #beautiful #beauty #king #queen #daughter #famous #famous #kannadafilms #kannadamovies #kgf #filmyduniya_66 #Filmy_Duniya #beautyqueen #beautydaughter #sandalwood #bollywood #Trollbollywood #troll #troll_guru #anupama

A post shared by FILMYDUNIYA (@filmyduniya_66) on

ಕೆಲ ತಿಂಗಳ ಹಿಂದಷ್ಟೇ ಚಿರಂಜೀವಿ ಸರ್ಜಾ ಅಕಾಲಿಕ ಸಾವಿಗೆ ತುತ್ತಾಗಿದ್ದರು. ಅವರು ಮೃತಪಟ್ಟಾಗ ಮೇಘನಾ ರಾಜ್‌ಗೆ ಐದು ತಿಂಗಳ ಗರ್ಭಿಣಿಯಾಗಿದ್ದರು.

 
 
 
 

 
 
 
 
 
 
 
 
 

@shalinismakeupprofile @makeover_by_raghu_nagaraj_n @classycaptures_official

A post shared by Meghana Raj Sarja (@megsraj) on

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು