ಗುರುವಾರ , ನವೆಂಬರ್ 26, 2020
21 °C

'ಜೇಮ್ಸ್‌ ಬಾಂಡ್‌' ಖ್ಯಾತಿಯ ಶಾನ್‌ ಕಾನರಿ ನಿಧನ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಲಂಡನ್‌: 'ಜೇಮ್ಸ್ ಬಾಂಡ್' ಸರಣಿಯ ಏಳು ಆವೃತ್ತಿಗಳಲ್ಲಿ ನಟಿಸಿದ್ದ ಜನಪ್ರಿಯ ಬ್ರಿಟಿಷ್ ನಟ ಶಾನ್‌ ಕಾನರಿ (90) ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ತಿಳಿಸಿದೆ.

ಸರ್ ಶಾನ್‌ ಅವರ ಪುತ್ರ ಜೇಸನ್ ಬಿಬಿಸಿಗೆ ತಮ್ಮ ತಂದೆಯ ನಿಧನದ ಸುದ್ದಿಯನ್ನು ತಿಳಿಸಿದ್ದಾರೆ. 'ಬಹಾಮಾಸ್‌ನಲ್ಲಿದ್ದ ಅವರು, ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಶನಿವಾರ ಚಿರನಿದ್ರೆಗೆ ಜಾರಿದ್ದಾರೆ,' ಎಂದು ಜೇಸನ್‌ ಹೇಳಿದ್ದಾರೆ.

ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ ಶಾನ್‌ ಕಾನರಿ ಅವರು ಆಸ್ಕರ್, ಮೂರು 'ಗೋಲ್ಡನ್ ಗ್ಲೋಬ್ಸ್' ಮತ್ತು ಎರಡು 'ಬಾಫ್ಟಾ" ಪ್ರಶಸ್ತಿಗಳೂ ಸೇರಿ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

1930ರಲ್ಲಿ ಎಡಿನ್‌ಬರ್ಗ್‌ನಲ್ಲಿ ಜನಿಸಿದ್ದ ಶಾನ್, ‌ 1988ರಲ್ಲಿ ತಮ್ಮ ಮೊದಲ ಆಸ್ಕರ್‌ ಪ್ರಶಸ್ತಿ ಪಡೆದಿದ್ದರು. ‘ದಿ ಅನ್‌ಟಚ್‌ಬಲ್ಸ್‌‘ ಎಂಬ ಅತ್ಯುತ್ತಮ ಪೋಷಕ ನಟ ಪಾತ್ರಕ್ಕಾಗಿ ಅವರಿಗೆ ಆಸ್ಕರ್‌ ದೊರೆತಿತ್ತು.  

'ಅವರು ನಿಜವಾದ ಜೇಮ್ಸ್ ಬಾಂಡ್ ಎಂದು ಜನರು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ' ಎಂದು ಚಲನಚಿತ್ರ ನಿರ್ಮಾಪಕ ಮೈಕೆಲ್ ಜಿ. ವಿಲ್ಸನ್ ಮತ್ತು ಬಾರ್ಬರಾ ಬ್ರೊಕೊಲಿ ಅಭಿಪ್ರಾಯಪಟ್ಟಿದ್ದಾರೆ.


44 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದದಲ್ಲಿ ಪ್ರದರ್ಶನಗೊಂಡಿದ್ದ "ಅಲೆಕ್ಸಾಂಡರ್" ಚಿತ್ರದ ವೀಕ್ಷಣೆಗಾಗಿ ಆಗಮಿಸಿದ್ದ ಬ್ರಿಟಿಷ್ ನಟ ಶಾನ್‌ ಕಾನರಿ ಮತ್ತು ಅವರ ಪತ್ನಿ ಮೈಕೆಲಿನ್ ರೋಕ್ಬ್ರೂನ್ 

1962ರಲ್ಲಿ ಮೂಡಿ ಬಂದ ಬಾಡ್‌ ಸೀರಿಸ್‌ನ ಮೊದಲ ಆವೃತ್ತಿ "Dr. No" ನಲ್ಲಿನ ಪಾತ್ರ ಕಾನರಿ ಅವರಿಗೆ ದೊಡ್ಡ ಬ್ರೇಕ್‌ ನೀಡಿತ್ತು. "ಫ್ರಮ್ ರಷ್ಯಾ ವಿಥ್ ಲವ್ (1963)" "ಗೋಲ್ಡ್ ಫಿಂಗರ್ (1964)" "ಥಂಡರ್ಬಾಲ್(1965)" "ಯು ಓನ್ಲಿ ಲೈವ್ ಟ್ವೈಸ್ (1967)" "ಡೈಮಂಡ್ಸ್ ಆರ್ ಫಾರೆವರ್(1971)" ಚಿತ್ರಗಳಲ್ಲಿ ಬಾಂಡ್ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.

'ದಿ ಹಂಟ್‌ ಫಾರ್‌ ರೆಡ್‌ ಅಕ್ಟೋಬರ್‌' ಎಂಬ ಜಲಾಂತರ್ಗಾಮಿ ಚಿತ್ರದಲ್ಲೂ ಶಾನ್‌ ನಟಿಸಿದ್ದರು. 

ಅವರ ನಿಧನಕ್ಕೆ ಜಗತ್ತಿನ ಸಿನಿಮಾ ದಿಗ್ಗಜರು ದಿಗ್ಭ್ರಾಂತಿ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು