ಮಂಗಳವಾರ, ಜನವರಿ 28, 2020
17 °C

ಜೆಎನ್‌ಯು ದಾಂದಲೆ: ಗಲಾಟೆ ಬೇಡ, ಶಾಂತಿಗೆ ಮನವಿ ಮಾಡಿದ ನಟಿ ಸನ್ನಿ ಲಿಯೋನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಯಾವುದೇ ರೀತಿಯ ತೊಂದರೆಯಾಗದಂತೆ, ಯಾರಿಗೂ ನೋವಾಗದ ರೀತಿಯಲ್ಲಿ ಉಂಟಾಗಿರುವ‌ ಸಮಸ್ಯೆಯನ್ನು ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು ಎಂದು ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಗುರುವಾರ ಹೇಳಿದ್ದಾರೆ.

ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ನಡೆದ ದಾಳಿಯನ್ನು ಖಂಡಿಸಿರುವ ಅವರು, ಹಿಂಸಾಚಾರದಿಂದ ಸಂತ್ರಸ್ತರಿಗೆ ನೋವಾಗುವುದಲ್ಲದೆ ಅವರ ಕುಟುಂಬದವರೂ ನೋವನ್ನು ಅನುಭವಿಸುತ್ತಾರೆ, ದಾಂದಲೆ, ದಾಳಿಯಿಂದ ಯಾವುದೇ ಪ್ರಯೋಜನವಿಲ್ಲ, ಇದರಿಂದ ದ್ವೇಷ ಬೆಳೆಯುತ್ತದೆ, ಆದ್ದರಿಂದ ಯುವ ಜನರು ವೈಷಮ್ಯ ಮರೆತು ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು ಎಂದು ಸನ್ನಿ ಲಿಯೋನ್‌ ಮನವಿ ಮಾಡಿದ್ದಾರೆ.

ಕಪ್ಪು ಉಡುಗೆಯಲ್ಲಿದ್ದ ಸನ್ನಿ ಲಿಯೋನ್‌ ಮಾಧ್ಯಮಗಳ ಜೊತೆ ಮಾತನಾಡಿ  ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಶಾಂತಿಗೆ ಮನವಿ ಮಾಡಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು