ಆರ್ಜೆ ಆಗಿರುವ ಮಯೂರ್ ಕಡಿ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ‘ಮಾತೊಂದ ಹೇಳುವೆ’ ಸಿನಿಮಾ ಜೂನ್.13ರಂದು ಬಿಡುಗಡೆಯಾಗಲಿದೆ.

‘ಚಿತ್ರದ ಕಥೆಯಲ್ಲಿ ನಾಯಕ ಉತ್ತರ ಕರ್ನಾಟಕದ ರೇಡಿಯೊ ಜಾಕಿ(ಆರ್ಜೆ) ಆಗಿರುತ್ತಾನೆ. ನಾಯಕಿ ಮೈಸೂರಿನಿಂದ ಧಾರವಾಡಕ್ಕೆ ಆಗಮಿಸುತ್ತಾಳೆ. ಇಬ್ಬರೂ ಭೇಟಿ ಆದಾಗ ನಡೆಯುವ ಘಟನೆಗಳೇ ಚಿತ್ರದ ಕಥಾಹಂದರ. ಇದೊಂದು ವಿಭಿನ್ನ ಪ್ರೇಮಕಥೆ. ಕುಟುಂಬ ಸಮೇತ ನೋಡಬಹುದಾದ ಚಿತ್ರವಿದು’ ಎನ್ನುತ್ತಾರೆ ಮಯೂರ್ ಕಡಿ.

ತಾರಾಗಣದಲ್ಲಿ ಮಯೂರ್ ಕಡಿ ಅವರ ಜೊತೆಯಲ್ಲಿ ಅಪೂರ್ವ ಆರಾಧ್ಯ, ಗಿರೀಶ್ ಶಿವಣ್ಣ, ಪಿ.ಡಿ. ಸತೀಶ್ ಚಂದ್ರ, ಪ್ರತೀಕ್ ರಡ್ಡೆರ್, ಚೇತನ್ ಮರಂಬೀಡ್, ವಿದ್ಯಾಸಾಗರ ದೀಕ್ಷಿತ್, ಪ್ರತೀಕ್, ಕಾರ್ತಿಕ್ ಪತ್ತಾರ್, ಸುನಿಲ್ ಪತ್ರಿ, ಜ್ಯೋತಿ ಪುರಾಣಿಕ್ ಮುಂತಾದವರಿದ್ದಾರೆ. ಮಹೇಶ್ವರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಪ್ರಭು ಸವಣೂರ್ ಹಾಗೂ ಅವಿನಾಶ್ ಯು.ಎಸ್. ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಪರ್ವತೇಶ್ ಪೋಲ್ ಛಾಯಾಚಿತ್ರಗ್ರಹಣ, ಉಲ್ಲಾಸ್ ಕುಲಕರ್ಣಿ ಸಂಗೀತ ನಿರ್ದೇಶನ ಹಾಗೂ ಅಭಯ್ ಕಡಿ ಸಂಕಲನ ಚಿತ್ರಕ್ಕಿದೆ. ಪ್ರಸನ್ನ ಕುಮಾರ್ ಎಂ.ಎಸ್. ಹಿನ್ನೆಲೆ ಸಂಗೀತ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.