ಚಿರು ವಿಡಿಯೊ ನೋಡುತ್ತಾ ಕುಳಿತ ಮಗ: ಇನ್ಸ್ಟಾಗ್ರಾಂನಲ್ಲಿ ಮೇಘನಾ ರಾಜ್ ಪೋಸ್ಟ್

ಬೆಂಗಳೂರು: ಭಾನುವಾರ, ಜೂನ್ 20ರಂದು ವಿಶ್ವ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಸೆಲೆಬ್ರಿಟಿಗಳು ಅಪ್ಪನ ಜತೆಗಿನ ಫೋಟೋ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಮಧುರ ನೆನಪನ್ನು ಹಂಚಿಕೊಳ್ಳುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ನಟಿ ಮೇಘನಾ ರಾಜ್ ತಮ್ಮ ಪುತ್ರನ ಕಿರು ವಿಡಿಯೊ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಚಿರಂಜೀವಿ ಸರ್ಜಾ ನೃತ್ಯದ ವಿಡಿಯೊವನ್ನು ಮೇಘನಾ ಪುತ್ರ ಲ್ಯಾಪ್ಟಾಪ್ನಲ್ಲಿ ವೀಕ್ಷಿಸುತ್ತಿರುವ ವಿಚಾರ ಹಂಚಿಕೊಂಡಿದ್ದಾರೆ.
ಚಿರು ಪುತ್ರ, ಅಪ್ಪಂದಿರ ದಿನದಂದು ನೃತ್ಯದ ವಿಡಿಯೊ ನೋಡುತ್ತಿರುವ ಸಂಗತಿಯನ್ನು ಮೇಘನಾ ಪೋಸ್ಟ್ ಮಾಡಿರುವುದಕ್ಕೆ ಚಿರು ಅಭಿಮಾನಿಗಳು ಕೂಡ ಪ್ರತಿಕ್ರಿಯಿಸಿದ್ದು, 4 ಲಕ್ಷಕ್ಕೂ ಅಧಿಕ ವೀವ್ಸ್ ಬಂದಿದೆ.
ಅಲ್ಲದೆ, ನಿರ್ದೇಶಕ ಕೆ.ಎಂ. ಚೈತನ್ಯ ಕಮೆಂಟ್ ಮಾಡಿ, ಏಕಾಗ್ರತೆ ನೋಡು! ಮರಿ ಸೈಟಿಂಸ್ಟ್ ಹಾಗೆ.. ಎಂದಿದ್ದರೆ, ಪನ್ನಗಭರಣ ಹೃದಯದ ಎಮೋಜಿ ಮೂಲಕ ಪ್ರೀತಿ ವ್ಯಕ್ತಪಡಿಸಿದ್ದಾರೆ.
ಈ ಮಳೆ ನೋಡಿ ನರ್ಸರಿ ರೈಮ್ಸ್ ನೆನಪಾಗುತ್ತಿದೆ: ಅನುಷ್ಕಾ ಶರ್ಮಾ
ಐಶ್ವರ್ಯಾ ಅರ್ಜುನ್ ಕಮೆಂಟ್ ಮಾಡಿ, ಲಿಟಲ್ ಗಣೇಶಾ.. ಎಂದು ಕರೆದಿದ್ದಾರೆ. ಚಂದನವನದ ಹಲವರು ಕೂಡ ಮೇಘನಾ ಪೋಸ್ಟ್ ಲೈಕ್ ಮಾಡಿದ್ದು, ಪುಟ್ಟ ಕಂದನಿಗೆ ಶುಭಹಾರೈಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.