ಶುಕ್ರವಾರ, ಡಿಸೆಂಬರ್ 3, 2021
25 °C

ಚಿರಂಜೀವಿ ಸರ್ಜಾ ಬರ್ತ್‌ಡೇ: ಮೇಘನಾ ರಾಜ್ ಭಾವನಾತ್ಮಕ ಪೋಸ್ಟ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Meghana Raj Instagram Post

ಬೆಂಗಳೂರು: ಇಂದು ನಟ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬವಾಗಿದ್ದು, ಪತಿಯ ನೆನಪಿಗೆ ಮೇಘನಾ ರಾಜ್ ಭಾವನಾತ್ಮಕ ಪೋಸ್ಟ್ ಜತೆಗೆ ಫೋಟೊ ಒಂದನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ.

ಚಿರಂಜೀವಿ ಅವರನ್ನು ಕಳೆದುಕೊಂಡ ಬಳಿಕ ಇದು ಎರಡನೇ ಹುಟ್ಟುಹಬ್ಬವಾಗಿದ್ದು, ಚಿರು ಕುರಿತು ಮೇಘನಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಚಿರು ನನ್ನ ಬೆಳಕು, ನನ್ನ ಮುಂದಿನ ಪಯಣಕ್ಕೆ ಈ ಬೆಳಕು ದಾರಿದೀಪವಾಗುತ್ತದೆ. ಹ್ಯಾಪಿ ಬರ್ತ್‌ಡೇ ಮೈ ಹಸ್ಬೆಂಡ್’ ಎಂದು ಮೇಘನಾ ಪತಿಯನ್ನು ನೆನೆದು ಭಾವನಾತ್ಮಕವಾಗಿ ಮನದಾಳವನ್ನು ಹಂಚಿಕೊಂಡಿದ್ದಾರೆ.

ಮತ್ತೊಂದೆಡೆ, ಮೇಘನಾ ರಾಜ್ ಚಿರಂಜೀವಿ ಹುಟ್ಟುಹಬ್ಬದ ದಿನವೇ ನಿರ್ದೇಶಕ ಪನ್ನಗಾಭರಣ ಅವರ ಚಿತ್ರ ಒಪ್ಪಿಕೊಂಡಿದ್ದಾರೆ. ಈ ಮೂಲಕ ಅವರು ಎರಡು ವರ್ಷದ ಬಳಿಕ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು