ರೈತರ ಬೆಂಬಲಿಸಿದ ಗ್ರೇಟಾಗೆ ರಮ್ಯಾ ಹೊಗಳಿಕೆ: ಬಾಲಿವುಡ್ ಮಂದಿಗೆ ತಿವಿತ

ಬೆಂಗಳೂರು: ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಸ್ವೀಡನ್‌ನ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಮಾಡಿದ್ದ ಟ್ವೀಟ್ ಮತ್ತು ಅವರ ನಿಲುವನ್ನು ನಟಿ, ಮಾಜಿ ಸಂಸದೆ ರಮ್ಯಾ ಅವರು ಪ್ರಶಂಸಿಸಿದ್ದಾರೆ.
ಎಂಥದ್ದೇ ದ್ವೇಷ, ಬೆದರಿಗೆ, ಮಾನವ ಹಕ್ಕು ಉಲ್ಲಂಘನೆಯಾದರೂ, ಭಾರತದ ರೈತರ ಹೋರಾಟದ ಪರವಾಗಿ ನಾನು ನಿಲ್ಲುತ್ತೇನೆ ಎಂದು ಗ್ರೇಟಾ ಥನ್‌ಬರ್ಗ್ ಹೇಳಿದ್ದರು.
ಗ್ರೇಟಾ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ರಮ್ಯಾ, ' More spine than most of Bollywood! ಬಾಲಿವುಡ್‌ನ ಬಹುತೇಕರಿಗಿಂತಲೂ ಹೆಚ್ಚು ಬೆನ್ನೆಲುಬಿದೆ (ಧೈರ್ಯವಿದೆ),' ಎಂಬರ್ಥದಲ್ಲಿ ಅವರು ಟ್ವೀಟ್ ಮಾಡಿದ್ದಾರೆ.
More spine than most of Bollywood! https://t.co/QeaJT8VCMM
— Divya Spandana/Ramya (@divyaspandana) February 4, 2021
ಕ್ರಿಕೆಟರ್‌ಗಳಿಗೆ ಈ ಧೈರ್ಯ ಇದೆಯೇ ಎಂದು ಹಲವರು ಅದೇ ಟ್ವೀಟ್‌ನಲ್ಲಿ ಕಮೆಂಟ್ ಮಾಡಿ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಮ್ಯಾ, 'ಇಬ್ಬರೂ ಒಂದೇ. ಇಬ್ಬರೂ ನಟಿಸುತ್ತಾರೆ. ಕಡಿಮೆ ಕ್ರಿಕೆಟ್... ಹೆಚ್ಚು ನಟನೆ,' ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.