ಸೋಮವಾರ, ನವೆಂಬರ್ 30, 2020
21 °C

ಬಾಲಿವುಡ್‌ ನಿರ್ಮಾಪಕ ಫಿರೋಜ್‌ ನಾಡಿಯಾಡ್ವಾಲಾ ಅವರ ಮನೆ ಮೇಲೆ ಎನ್‌ಸಿಬಿ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಿರ್ಮಾಪಕ ಫಿರೋಜ್‌ ನಾಡಿಯಾಡ್ವಾಲಾ ಅವರ ಮನೆ ಮೇಲೆ ಎನ್‌ಸಿಬಿ (ಮಾದಕ ವಸ್ತು ನಿಯಂತ್ರಣ ವಿಭಾಗ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವರ ಪತ್ನಿಯ ವಿಚಾರಣೆ ನಡೆಸಿದ್ದಾರೆ. 

ಪ್ರಮುಖ ಇಂಗ್ಲಿಷ್‌ ಸುದ್ದಿವಾಹಿನಿಯೊಂದು, ನಾಡಿಯಾಡ್ವಾಲಾ ಅವರ ಮನೆಯಿಂದ ಅಲ್ಪ ಪ್ರಮಾಣದ ಡ್ರಗ್ಸ್‌ನ್ನು ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ ಎಂದು ವರದಿ ಮಾಡಿದೆ. 

‘ಮಲಾಡ್, ಅಂಧೇರಿ, ಲೋಖಂಡ್‌ವಾಲಾ, ಖಾರ್ಘರ್ ಮತ್ತು ಕೋಪರ್‌ಖೈರಾಣೆಯಲ್ಲಿಯೂ ಎನ್‌ಸಿಬಿ ದಾಳಿ ನಡೆಸಿದೆʼ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 

ನಾಡಿಯಾಡ್ವಾಲಾ ಅವರು, ‘ಫಿರ್ ಹೆರಾ ಫೆರಿ’, ‘ಆವರ ಪಾಗಲ್ ದಿವಾನ’, ‘ಸ್ವಾಗತ್’ ‘ಆನ್:ಮೆನ್‌ ಅಟ್‌ವರ್ಕ್‌ʼ, ‘ಫೂಲ್‌ ಆಂಡ್‌ ಫೈನಲ್ʼ ಚಿತ್ರಗಳ ನಿರ್ಮಾಪಕರು.‌

ಮತ್ತೊಂದೆಡೆ, ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯವು ದೀಪಿಕಾ ಪಡುಕೋಣೆ ಅವರ ಮಾಜಿ ವ್ಯವಸ್ಥಾಪಕ ಕರಿಷ್ಮಾ ಪ್ರಕಾಶ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು