ಶ್ಯಾಡೋ, ಮಂಗಳವಾರ ರಜಾದಿನ, ಇನ್ಸ್ಪೆಕ್ಟರ್ ವಿಕ್ರಂ ಫೆ. 5ರಂದು ತೆರೆಗೆ

ಫೆಬ್ರುವರಿಯಲ್ಲಿ ಕೆಲವು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ವಿನೋದ್ ಪ್ರಭಾಕರ್ ಅಭಿನಯದ ‘ಶ್ಯಾಡೋ’ ಮತ್ತು ಚಂದನ್ ಆಚಾರ್ ಮತ್ತು ಲಾಸ್ಯ ನಾಗರಾಜ್ ಅಭಿನಯದ ‘ಮಂಗಳವಾರ ರಜಾದಿನ’, ಪ್ರಜ್ವಲ್ ದೇವರಾಜ್ ಅಭಿನಯದ ‘ಇನ್ಸ್ಪೆಕ್ಟರ್ ವಿಕ್ರಂ’ ಮೂರು ಚಿತ್ರಗಳು ಫೆ. 5ರಂದು ಬಿಡುಗಡೆಗೆ ತುದಿಗಾಲಲ್ಲಿ ನಿಂತಿವೆ.
‘ಶ್ಯಾಡೋ’ ಚಿತ್ರವನ್ನು ರವಿ ಗೌಡ ನಿರ್ದೇಶಿಸಿದ್ದಾರೆ. ಚಕ್ರವರ್ತಿ ಸಿಎಚ್ ಅವರು ಶ್ರೀ ಕನಕದುರ್ಗ ಚಲನಚಿತ್ರ ಬ್ಯಾನರ್ ಅಡಿ ನಿರ್ಮಿಸುತ್ತಿದ್ದಾರೆ. ಚಿತ್ರದ ಟ್ರೈಲರ್ ಈಗಾಗಲೇ ಜನಮೆಚ್ಚುಗೆ ಗಳಿಸಿದೆ. ವಿನೋದ್ ಪ್ರಭಾಕರ್ ಅವರು ತಮ್ಮ ತಂದೆ ಟೈಗರ್ ಪ್ರಭಾಕರ್ ಛಾಯೆಯಲ್ಲಿಯೇ ಸಿನಿ ಪಯಣ ಆರಂಭಿಸಿದ್ದಾರೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.
ತನ್ನ ನೆರಳು ಕಾಣೆಯಾಗಿದೆ ಎಂದು ದೂರು ನೀಡುವಲ್ಲಿಂದ ಕಥೆ ಆರಂಭವಾಗುತ್ತದೆ. ಪತ್ತೆದಾರಿ ಕಥೆಯಂತೆ ಟ್ರೇಲರ್ ನೋಡಿದಾಗ ಭಾಸವಾಗುತ್ತಿದೆ. ದರ್ಶನ್ ಅಭಿನಯದ ರಾಬರ್ಟ್ನಲ್ಲೂ ವಿನೋದ್ ಪ್ರಭಾಕರ್ಗೆ ಪ್ರಮುಖ ಪಾತ್ರವೊಂದಿದೆ. ಶೋಭಿತಾ ರಾಣಾ, ಶರತ್ ಲೋಹಿತಾಶ್ವ, ಸತ್ಯಾ ದೇವ್ ಮತ್ತಿತರರು ‘ಶ್ಯಾಡೋ’ ತಾರಾಗಣದಲ್ಲಿ ಇದ್ದಾರೆ.
‘ಮಂಗಳವಾರ ರಜಾದಿನ’ ಕ್ಷೌರಿಕರ ಬದುಕಿನ ಕಥಾ ಹಂದರ ಹೊಂದಿದೆ. ಕೇಶ ವಿನ್ಯಾಸಕ ತಂದೆ, ಮಗನ ಸುತ್ತ ನಡೆಯುವ ಕಥೆ. ಇದರಲ್ಲಿ ಕಿಚ್ಚ ಸುದೀಪ್ ಅವರು ಕಥೆಯ ಪ್ರಧಾನ ಎಳೆಯಲ್ಲಿ ಇದ್ದಾರೆ. ಕುಟುಂಬ ಮನೋರಂಜನೆ, ಹಾಸ್ಯ ಪ್ರಧಾನ ಚಿತ್ರ ಎಂದು ಚಿತ್ರತಂಡ ಹೇಳಿಕೊಂಡಿದೆ. ಇದರ ಟ್ರೈಲರ್ ಕೂಡಾ ವೀಕ್ಷಕರ ಮೆಚ್ಚುಗೆ ಗಳಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.