ಬೆಂಗಳೂರು: ಹೊಸ ವರ್ಷ ಶಾಂತ, ಸುಂದರ, ಪ್ರಕಾಶಮಾನವಾಗಿರಲಿ ಎಂದು ನಟಿ ರಾಧಿಕಾ ಪಂಡಿತ್ ಹೇಳಿದ್ದಾರೆ.

ಬೀಚ್ನಲ್ಲಿ ಸೂರ್ಯಾಸ್ತಮಾನವನ್ನು ಆನಂದಿಸುತ್ತಾ ವಿಶ್ರಾಂತಿ ಪಡೆಯುತ್ತಿರುವ ಫೋಟೊವೊಂದನ್ನು ರಾಧಿಕಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

‘ನಾನು ಈ ಚಿತ್ರದಲ್ಲಿ ಹೇಗೆ ಆರಾಮವಾಗಿ, ಶಾಂತಿಯಿಂದ ಇದ್ದೇನೊ ಅದೇ ರೀತಿ ಹೊಸ ವರ್ಷವೂ ಇರಲಿ ಎಂದು ಆಶಿಸುತ್ತೇನೆ. ವರ್ಷವಿಡಿಶಾಂತಿ, ಸುಂದರ, ಪ್ರಕಾಶಮಾನ, ತೃಪ್ತಿಕರವಾದ ಸಂತೋಷ ಇರಬೇಕು’ಎಂದು ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ರಾಧಿಕಾ, ಅಭಿಮಾನಿಗಳಿಗಾಗಿ ಹೊಸ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

2016ರ ಡಿಸೆಂಬರ್ನಲ್ಲಿ ನಟ ಯಶ್ ಅವರೊಂದಿಗೆ ರಾಧಿಕಾ ಮದುವೆಯಾದರು. ಅವರಿಗೆ ಐರಾ ಮತ್ತು ಯಥರ್ವ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಯಶ್ –ರಾಧಿಕಾ ದಂಪತಿ ಇತ್ತೀಚೆಗೆ 5ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಜತೆಗೆ, ಹೊಸ ವರ್ಷವನ್ನು ವಿದೇಶದಲ್ಲಿ ಬರಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.