ಖ್ಯಾತ ನಿರ್ದೇಶಕ ರಾಮ್‌ಗೋಪಾಲ್ ವರ್ಮಾರನ್ನು ಅಮಾನತು ಮಾಡಿದ ಎಫ್‌ಡಬ್ಲ್ಯುಸಿಇ

ಖ್ಯಾತ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಕಲಾವಿದರು, ತಂತ್ರಜ್ಞರು ಹಾಗೂ ಕೆಲಸಗಾರರಿಗೆ ₹1 ಕೋಟಿಯಷ್ಟು ಮೊತ್ತದ ಸಂಬಳ ನೀಡಿಲ್ಲ ಎಂದು ವೆಸ್ಟರ್ನ್ ಇಂಡಿಯಾ ಸಿನಿ ನೌಕರರ ಒಕ್ಕೂಟ (ಎಫ್‌ಡಬ್ಲ್ಯುಐಸಿಇ) ಆರೋಪಿಸಿದೆ. ಅಲ್ಲದೇ ಆ ಸಂಸ್ಥೆ ಇನ್ನು ಮುಂದೆ ವರ್ಮಾ ಜೊತೆ ಕೆಲಸ ಮಾಡದೇ ಇರಲು ನಿರ್ಧರಿಸಿದೆ.
ಈ ವಿಷಯಕ್ಕೆ ಸಂಬಂಧಿಸಿ ಎಫ್‌ಡಬ್ಲ್ಯುಐಸಿಇ ಈಗಾಗಲೇ ರಾಮ್‌ಗೋಪಾಲ್ ವರ್ಮಾಗೆ ನೋಟಿಸ್ ನೀಡಿತ್ತು. ಆದರೂ ಅವರು ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜೊತೆಗೆ ಬಾಕಿ ಹಣವನ್ನು ಸಂದಾಯ ಮಾಡಿಲ್ಲ ಎಂಬ ಗಂಭೀರ ಆರೋಪ ಮಾಡಿದೆ.
2020ರ ಸೆಪ್ಟೆಂಬರ್ 17 ಕ್ಕೆ ಕಾರ್ಮಿಕರ ಬಾಕಿ ಸಂಬಳದ ಕುರಿತಾಗಿ ವಿವರಣೆ ನೀಡುವಂತೆ ಎಫ್‌ಡಬ್ಲ್ಯುಐಸಿಇ ನಿರ್ದೇಶಕರು ವರ್ಮಾಗೆ ನೋಟಿಸ್ ಕಳುಹಿಸಿದ್ದರು. ಅದಾದ ಬಳಿಕವೂ ಬಾಕಿ ಹಣವನ್ನು ಸಂದಾಯ ಮಾಡುವಂತೆ ಹಲವು ಬಾರಿ ಪತ್ರ ಬರೆಯಲಾಗಿತ್ತು. ಆದರೆ ವರ್ಮಾ ಅದನ್ನು ಸ್ವೀಕರಿಸಲು ನಿರಾಕರಿಸಿದ್ದರು ಎನ್ನಲಾಗುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.